GPSC Recruitment: ಇಂಜಿನಿಯರ್ ಕನಸಿಗೆ ಸರ್ಕಾರಿ ಮುದ್ರೆ: GPSC AE ನೇಮಕಾತಿ ಆರಂಭ! ಇಂದೇ ಅರ್ಜಿ ಸಲ್ಲಿಸಿ

0
Spread the love

ಎಂಜಿನಿಯರಿಂಗ್ ಮುಗಿಸಿ ಸರ್ಕಾರಿ ಹುದ್ದೆಗೆ ಹೊಕ್ಕು ಸಶಕ್ತ ಭವಿಷ್ಯ ಕಟ್ಟುವ ಕನಸು ಕಾಣುತ್ತಿದ್ದೀರಾ? ಇಲ್ಲಿದೆ ನಿಮಗಾಗಿ ಒಂದು ಭರವಸೆ ನೀಡುವ ಮಹತ್ವದ ಅವಕಾಶ! ಗುಜರಾತ್ ಸಾರ್ವಜನಿಕ ಸೇವಾ ಆಯೋಗ — GPSC ಇದೀಗ ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕಟಣೆ ಹೊರಡಿಸಿದೆ

Advertisement

ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ಒಟ್ಟು 100 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಿಲ್ಡಿಂಗ್ ಪ್ರಾಜೆಕ್ಟ್ ಗಳಿಂದ ಹಿಡಿದು ಪಬ್ಲಿಕ್ ಎಲೆಕ್ಟ್ರಿಕ್ ಪ್ಲ್ಯಾನ್ಗಳವರೆಗೆ ವಿವಿಧ ಸರ್ಕಾರಿ ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 9, 2025.

ಅರ್ಹತೆಗಳು: “ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಡಿಗ್ರಿ ಪಡೆದಿರಬೇಕು. ಜೊತೆಗೆ ಅಭ್ಯರ್ಥಿಯ ವಯಸ್ಸು ಕನಿಷ್ಟ 20 ರಿಂದ ಗರಿಷ್ಠ 35 ವರ್ಷವರೆಗೆ ಇರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ

ಆಯ್ಕೆ ಪ್ರಕ್ರಿಯೆ: “ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯಲಿದೆ – ಮೊದಲು ವಸ್ತುನಿಷ್ಠ ಆಧಾರದ ಮೇಲೆ ಪ್ರಾಥಮಿಕ ಪರೀಕ್ಷೆ, ನಂತರ ಸಂದರ್ಶನ. ಈ ಪ್ರಾಥಮಿಕ ಪರೀಕ್ಷೆಯನ್ನು GPSC ಅಕ್ಟೋಬರ್ 12ರಂದು ನಡೆಸಲಿದೆ.

ಅರ್ಜಿ ಶುಲ್ಕ: “ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ನಿಗದಿಯಾಗಿದೆ. ಎಸ್ಸಿ/ಎಸ್ಟಿ ಹಾಗೂ ಇತರೆ ಮೀಸಲಾತಿ ವರ್ಗಗಳಿಗೆ ವಿನಾಯಿತಿ ಇದೆ. ಡೆಬಿಟ್ ಕಾರ್ಡ್ ಅಥವಾ ಆನ್ಲೈನ್ ಪೇಮೆಂಟ್ ಮೂಲಕವೇ ಪಾವತಿ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: “ಅಭ್ಯರ್ಥಿಗಳು gpsc.gujarat.gov.in ವೆಬ್ಸೈಟ್ಗೆ ಭೇಟಿ ನೀಡಿ ‘Apply Online’ ವಿಭಾಗದಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ, ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಶುಲ್ಕ ಪಾವತಿಸಿ. ಅರ್ಜಿಯನ್ನು ಸಲ್ಲಿಸಿದ ನಂತರ ಪ್ರಿಂಟ್ಔಟ್ ತೆಗೆದುಕೊಳ್ಳಿ.

ದಿನೇ ದಿನೇ ಉದ್ಯೋಗ ಸ್ಪರ್ಧೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ತಗೆದುಕೊಂಡು ನಿಮ್ಮ ಕನಸನ್ನು ನನಸಾಗಿಸೋದು ನಿಮ್ಮ ಕೈಯಲ್ಲಿದೆ. GPSC AE ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ – ನಿಮ್ಮ ತಕ್ಷಣದ ನಡೆ ನಿಮ್ಮ ಭವಿಷ್ಯವನ್ನು ನಿರ್ಧರಿಸಲಿದೆ.


Spread the love

LEAVE A REPLY

Please enter your comment!
Please enter your name here