ಹುಬ್ಬಳ್ಳಿ: ಸಿಟಿ ರವಿಗೆ ಬೆದರಿಕೆ ಪತ್ರ ಬಂದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಈ ಬೆದರಿಕೆ ಬಂದಿದೆ. ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಕ್ಕೆ ಬೆದರಿಕೆ ಪತ್ರ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇನ್ನೂ ಈ ವಿಚಾರವಾಗಿ ಮಾತನಾಡಿದ ಪ್ರಹ್ಲಾದ್ ಜೋಶಿ, ಸಿಟಿ ರವಿಗೆ ಬೆದರಿಕೆ ಪತ್ರ ಬಂದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಸಿಟಿ ರವಿಯವರ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮವಾಗಿಲ್ಲ. ನಮ್ಮದು ಸುಸಂಸ್ಕೃತ ರಾಜ್ಯ, ಮನಸ್ಸು ಮಾಡಿದರೇ ಬೆದರಿಕೆ ಪತ್ರ ಕಳುಹಿಸಿದವರನ್ನು ಒಂದು ಗಂಟೆಯಲ್ಲಿ ಹಿಡಿಯಬಹುದು ಎಂದರು.
ಇನ್ನೂ ನಕ್ಸಲ್ ಶರಣಾಗತಿಗೆ ನಮ್ಮ ವಿರೋಧವಿಲ್ಲ. ನಕ್ಸಲ್ ಚಟುವಟಿಕೆಗೆ ವಿದೇಶದಿಂದ ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದವರ ಬೆಂಬಲವಿದೆ. ಪ್ಯಾಕೇಜ್ಗೆ ನಮ್ಮ ವಿರೋಧವಿಲ್ಲ. ನಕ್ಸಲ್ರು ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಎಂಬುವುದು ಮುಖ್ಯವಾಗಿ. ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಅಂದರೇ ಬೇರೆಯವರಿಗೆ ಕೊಟ್ರಾ? ಎಂದು ಪ್ರಶ್ನಿಸಿದರು.