ಬೆಳಗಾವಿ: ಮೀಸಲಾತಿ ವಿಚಾರದಲ್ಲಿ ಸರ್ಕಾರ ಬಹಳ ಯೋಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲಾಠಿ ಚಾರ್ಜ್ ಆಗಿರುವಂತಹ ಘಟನೆಯನ್ನು ನಾನು ಖಂಡಿಸುತ್ತೇನೆ. ಸರಿಯೋ, ತಪ್ಪೋ ಎನ್ನುವಂತದ್ದನ್ನು ಜನರು ಅರ್ಥ ಮಾಡಿಕೊಳ್ಳಬೇಕು.
Advertisement
ಸಿಎಂ ತಪ್ಪಿಗೆ ಕ್ಷಮೆ ಕೇಳುವಂತದ್ದು ಯಾವ ಮಟ್ಟಿಗೆ ಸರಿಯೋ ಎನ್ನುವಂತದ್ದು ನನಗೆ ಅರ್ಥವಾಗುತ್ತಿಲ್ಲ. ಆದರೆ ಶಾಂತಿಯುತವಾಗಿ ಆಗಬೇಕಾದ ಘಟನೆ ಹೀಗೆ ಆಗಿದೆ. ವೈಯಕ್ತಿಕವಾಗಿ ಇದರ ಬಗ್ಗೆ ನನಗೆ ಆಘಾತವಿದೆ. ಆದರೆ ಯಾಕೆ ಆಗಿದೆ, ಏನು ಕಾರಣ ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಬಹಳ ಯೋಚಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.