ಬೆಂಗಳೂರು: ನಗರದಲ್ಲಿ ರಸ್ತೆಬದಿ ಅಕ್ರಮ ಪಾರ್ಕಿಂಗ್‌ಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಬಿಎ (GBA) ಪೇ ಅಂಡ್ ಪಾರ್ಕಿಂಗ್ ನಿಯಮವನ್ನು ಜಾರಿ ಮಾಡಿದೆ.
ಇನ್ಮುಂದೆ ರಸ್ತೆಬದಿ ವಾಹನ ನಿಲ್ಲಿಸಲು ಶುಲ್ಕ ಪಾವತಿ ಕಡ್ಡಾಯವಾಗಲಿದೆ. ಈ ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಪಾರ್ಕಿಂಗ್ ನಿರ್ವಹಣೆಗೆ ಶನಿವಾರ (ಜ.10) ಟೆಂಡರ್ ಕರೆಯಲಾಗಿದೆ ಎಂದು ಜಿಬಿಎ ಕಮಿಷನರ್ ತಿಳಿಸಿದ್ದಾರೆ.
ಬೆಂಗಳೂರು ಸೆಂಟ್ರಲ್ ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಮರ್ಷಿಯಲ್ ರೋಡ್, ಡಿಕೆನ್ಸನ್ ರೋಡ್, ಮಿಲ್ಲರ್ಸ್ ರೋಡ್ ಸೇರಿದಂತೆ ಹಲವೆಡೆ ಪೇ ಅಂಡ್ ಪಾರ್ಕಿಂಗ್ ಜಾಗಗಳನ್ನು ಗುರುತಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರೂ. ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಗಂಟೆಗೆ 30 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ತಿಂಗಳ ಪಾಸ್ ವ್ಯವಸ್ಥೆಯೂ ಲಭ್ಯವಾಗಲಿದೆ.



