ಸುಗ್ರೀವಾಜ್ಞೆ ಆದ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮೈಕ್ರೋ ಸಾಲ, ಸಣ್ಣ ಸಾಲಗಳ ಬಲವಂತದ ವಸೂಲಿ ಪ್ರತಿಬಂಧಕ ಅದ್ಯಾದೇಶಕ್ಕೆ ರಾಜ್ಯಪಾಲರಿಂದ ಬುಧವಾರ ಒಪ್ಪಿಗೆ ಸಿಕ್ಕಿದೆ. ಕಾನೂನು ಬಾಹಿರ ಲೇವಾದೇವಿ ವ್ಯವಹಾರ ಮಾಡಿ ಸಾಲ ಪಡೆದವರನ್ನು ಹಿಂಸಿಸುವ, ಒತ್ತೆಯಾಳುಗಳನ್ನಾಗಿ ಮಾಡಿಕೊಳ್ಳುವ, ದೈಹಿಕ ಹಿಂಸೆ ನೀಡುವ ಅಕ್ರಮ ಕೃತ್ಯವನ್ನು ನಿಯಂತ್ರಿಸಲು ಮತ್ತು ಅಕ್ರಮ ಲೇವಾದೇವಿ ವ್ಯವಹಾರ ನಿಯಂತ್ರಿಸಲು ಈ ಸುಗ್ರೀವಾಜ್ಞೆ ಮೂಲಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

Advertisement

ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲರು ಒಪ್ಪಿಗೆ ನೀಡಿದ್ದರಿಂದ ಬಡವರ ರಕ್ಷಣೆಗೆ ಸರ್ಕಾರಕ್ಕೆ ಬಲ ಬಂದಂತಾಗಿದೆ. ಸಾಲಗಾರರಿಂದ ಜನರನ್ನು ರಕ್ಷಿಸಲು ಜನಪರ ಕಾನೂನು ಅವಶ್ಯವಿತ್ತು. ಸಾಲ ವಸೂಲಿ ಹೆಸರಲ್ಲಿ ಕಿರುಕುಳ, ಅಮಾನವೀಯ ಕೃತ್ಯಗಳು, ವಿಪರೀತ ಬಡ್ಡಿ, ಮೀಟರ್ ಬಡ್ಡಿ ದಂಧೆಗಳಿಗೆ ತಡೆ ನೀಡಬೇಕು ಎಂಬ ನಿಲುವು ಸರ್ಕಾರ ಹೊಂದಿದೆ. ಇದರ ಪರಿಣಾಮವೇ ಸುಗ್ರೀವಾಜ್ಞೆ ಎಂದು ಹೇಳಿದರು.

ಸುಗ್ರೀವಾಜ್ಞೆ ತರುವ ಸಂದರ್ಭದಲ್ಲಿ ರಾಜ್ಯದಲ್ಲಿ ಸಂವಾದ, ವಾದ-ವಿವಾದ, ಆಲೋಚನೆಗಳನ್ನು ಸರಿದೂಗಿಸಿ ಜನಪರ ಸುಗ್ರೀವಾಜ್ಞೆ ತರಲಾಗಿದೆ. ರೈತರು, ಮಹಿಳೆಯರು, ಮಹಿಳಾ ಸ್ವ-ಸಹಾಯ ಗುಂಪು, ಮಹಿಳಾ ರೈತರು, ಫುಟ್‌ಪಾತ್ ಉದ್ದಿಮೆಗಳು, ಅಂಗಂಡಿಗಳಲ್ಲಿ ಕೆಲಸ ಮಾಡುವರು, ಬಡವರು, ಆರ್ಥಿಕವಾಗಿ ಹಿಂದುಳಿದವರ ರಕ್ಷಣೆ ಮಾಡಲು ಈ ಸುಗ್ರೀವಾಜ್ಞೆಯಿಂದ ಅನುಕೂಲ ಆಗಲಿದೆ.

ನೋಂದಾಯಿತವಲ್ಲದ, ಕಾನೂನು ಬಾಹಿರವಾಗಿ ಲೇವಾದೇವಿ ವ್ಯವಹಾರ ಮಾಡುವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸಾಲ ಪಡೆದವರಿಗೆ ಒತ್ತಾಯಪೂರ್ವಕ ಕಿರುಕುಳ, ಅವರನ್ನು ಒತ್ತೆ ಆಳುಗಳಾಗಿ ಮಾಡಿಕೊಳ್ಳುವುದು ಕಾನೂನು ಬಾಹಿರ ಚಟುವಟಿಕೆ ಆಗಿತ್ತು. ಲೇವಾದೇವಿ ವ್ಯವ್ಯಹಾರ ಮಾಡುವವರಿಂದ ಕಿರುಕಳಕ್ಕೆ ಒಳಪ್ಪಟ್ಟವರನ್ನು ರಕ್ಷಣೆ ಮಾಡುವ ಕಾನೂನು ಅಗತ್ಯ ಇತ್ತು. ಇಂತಹ ಕಾನೂನಿಂದ ಜನರ ರಕ್ಷಣೆಯನ್ನು ಕಾನೂನು ಚೌಕಟ್ಟಿನ ಒಳಗೆ ತಂದಂತಾಯಿತು ಎಂದು ಎಚ್.ಕೆ. ಪಾಟೀಲ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿಸಿಎಫ್ ಸಂತೋಷಕುಮಾರ, ಸಿದ್ದು ಪಾಟೀಲ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ ಸೇರಿದಂತೆ ಇತರರು ಇದ್ದರು.

ಈ ಸುಗ್ರೀವಾಜ್ಞೆ ಮೂಲಕ ಸಾಲಗಾರನ ಜೀವನದ ಘನತೆಯನ್ನು ಕಾಪಾಡಿ, ಬಡಜನರ ಶೋಷಣೆಯನ್ನು ತಡೆಯಲು ಅನುಕೂಲವಾಗಿದ್ದು, ಸಮಾಜದಲ್ಲಿರುವ ಬಡವರ ರಕ್ಷಣೆಗೆ ಸಹಾಯಕವಾಗಿದೆ. ಸಾಲ ಪಡೆದವರು ಬದುಕಿನಲ್ಲಿ ಅಂಜದೆ ಸಮಾಧಾನದ ಬದುಕು ನಡೆಸಬಹುದಾಗಿದೆ. ಜನರಿಗೆ ಕಿರುಕುಳ ನೀಡದೇ ನಿಯಮಾನುಸಾರ ಬಡ್ಡಿ ಪಡೆಯುವರಿಗೆ, ಬ್ಯಾಂಕ್‌ಗಳಿಗೆ ಈ ಸುಗ್ರೀವಾಜ್ಞೆಯಿಂದ ತೊಂದರೆ ಆಗುವುದಿಲ್ಲ. ಕಾನೂನಾತ್ಮಕ ವ್ಯವಹಾರಕ್ಕೆ ಸ್ವಾಗತ ಇದ್ದೇ ಇದೆ.

– ಎಚ್.ಕೆ. ಪಾಟೀಲ.

ಕಾನೂನು ಸಚಿವರು.


Spread the love

LEAVE A REPLY

Please enter your comment!
Please enter your name here