ಬಾಗಲಕೋಟೆ: ರಾಜ್ಯಪಾಲರು ಸರ್ಕಾರವನ್ನ ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಡಳಿತ ನಡೆಸಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.. ನಗರದಲ್ಲಿ ಮಾತನಾಡಿಧ ಅವರು, ಸರ್ಕಾರ ಇವತ್ತು ವಿಧಾನಸಭೆಯಲ್ಲಿ ಆಡಳಿತ ಮಾಡ್ತಿಲ್ಲ. ಹೋಟೆಲ್, ಬಾರ್‌ಗಳಲ್ಲಿ, ಗುಂಪು ಗುಂಪಾಗಿ ಕುರ್ಚಿಗಾಗಿ ಕಾದಾಟ ಮಾಡ್ತಿದ್ದಾರೆ.
ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ರಾಜ್ಯಪಾಲರು ಕೂಡಲೇ ಸರ್ಕಾರವನ್ನ ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಡಳಿತ ನಡೆಸಬೇಕೆಂದು ಆಗ್ರಹ. ಇಲ್ಲದಿದ್ದರೆ ರಾಜ್ಯ ಸಂಪೂರ್ಣವಾಗಿ ಹಾಳಾಗಿ ಹೋಗುತ್ತೆ.
ಜನ ಸಂಕಷ್ಟದಲ್ಲಿದ್ದಾರೆ, ಆರ್ಥಿಕವಾಗಿ ದಿವಾಳಿಯಾಗಿರುವ ಸರ್ಕಾರ ದಿನಾಲು ಹೊಸ ಹೊಸ ನಾಟಕಗಳನ್ನ ಮಾಡಿ, ಜನರಿಗೆ ಮೋಸ ಮಾಡುತ್ತಿದೆ. ದಿಕ್ಕು ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಸದಾನಂದಗೌಡರ ಹೇಳಿಕೆ ಕುರಿತು ಮಾತನಾಡಿ, ಡಿಕೆ ಶಿವಕುಮಾರ್ ಜೊತೆ ಸೇರಿ ಸರ್ಕಾರ ಮಾಡೋಕೆ ರೆಡಿ ಇದ್ದೀವಿ ಅಂತ ಅಲ್ಲ. ನಮ್ಮದೊಂದು ರಾಜಕೀಯ ಪಕ್ಷ. ನಾವು ರಾಜಕೀಯ ಅಸ್ಥಿರತೆ ಉಂಟಾದಾಗ, ಕಣ್ಣು ಮುಚ್ಚಿ ಕೂರೋಕೆ ಆಗುವುದಿಲ್ಲ. ನಾವು ಒಂದು ರಾಜಕೀಯ ಪಕ್ಷವಾಗಿ, ವಿರೋಧ ಪಕ್ಷವಾಗಿ ಏನೆಲ್ಲಾ ಕ್ರಮಗಳನ್ನು ಜರುಗಿಸಬೇಕೋ ಅದನ್ನು ಜರುಗಿಸುತ್ತೇವೆ ಎಂದರು.


