ಗದಗ: ಬರ ಅಧ್ಯಯನ, ರೈತ ಆತ್ಮಹತ್ಯೆ, ರೈತರು ಗುಳೆ ಹೋಗ್ತಿದ್ದಾರೆ, ಪಂಪ್ ಸೆಟ್ಗಳಿಗೆ ವಿದ್ಯುತ್ ಇಲ್ಲ, ಗ್ಯಾರಂಟಿ ಸಿಗ್ತಾ ಇಲ್ಲ, ಅವೆಲ್ಲಾ ಕಾಂಗ್ರೆಸ್ ನವರು ಬಿಟ್ಟುಬಿಟ್ಟಿದ್ದಾರೆ. ಇವೆಲ್ಲಾ ಮರೆಮಾಚೋ ಕಾರಣಕ್ಕಾಗಿ ಮುಖ್ಯಮಂತ್ರಿ ಡ್ಯಾನ್ಸ್ ಮಾಡ್ತಾರೆ ಎಂದು ಗದಗನಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ಕಡೆ ಎಲ್ಲಾರೂ ನಾನು ಮುಖ್ಯಮಂತ್ರಿ ಆಗಬೇಕು ಅಂತಾರೆ. ಯಾರೋ ಒಬ್ಬ ದುಬೈಗೆ ಹೋಗಬೇಕು ಅಂತಾರೆ. ಒಬ್ಬರು ರೆಸಾರ್ಟಲ್ಲಿ ಕುಳಿತು ರಾಜಕಾರಣ ಮಾಡಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತಾ ಪ್ರಯತ್ನ ಮಾಡ್ತಾರೆ.
ಮುಖ್ಯಮಂತ್ರಿ ಇಲ್ಲೊಂದು ಹೇಳಿಕೆ ಕೊಡ್ತಾರೆ, ಬೇರೆ ಜಿಲ್ಲೆಯಲ್ಲಿ ಬೇರೆ ಹೇಳಿಕೆ ಕೊಡ್ತಾರೆ. ಒಟ್ನಲ್ಲಿ ಬರಗಾಲ ಮರೆಸೋ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜು ಕುರಡಗಿ ಸೇರಿದಂತೆ ಹಲವರಿದ್ದರು.