ವಿಜಯಸಾಕ್ಷಿ ಸುದ್ದಿ, ಗದಗ: ಜಿ.ಪಿ.ಎಲ್ ಸೀಸನ್-3ರ ಜರ್ಸಿ ಹಾಗೂ ಟ್ರೋಫಿ ಅನಾವರಣ ಮತ್ತು ಹರಾಜು ಪ್ರಕ್ರಿಯೆಯನ್ನು ಆದರ್ಶ ಶಿಕ್ಷಣ ಸಮಿತಿ ಕಾಲೇಜಿನಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ಪ್ರಕಾಶ ಸಂಕನೂರ, ಭೂಷಣ ಪಿ. ಶಾಹ ಮತ್ತು ಆನಂದ ಪೋತ್ನಿಸ್ ಆಗಮಿಸಿದ್ದರು. ಜಿ.ಪಿ.ಎಲ್ ಸೀಸನ್-3ರ ಗದಗ ಸ್ಟ್ರೈಕರ್ಸ್ ತಂಡದ ಮಾಲೀಕರು – ಅಸ್ಲಮ್ ನರೇಗಲ್, ಗದಗ ಟೈಟನ್ಸ್ ತಂಡದ ಮಾಲೀಕರು – ಶೈಲೇಶ್ ಶಾಹ, ಗದಗ ವಲ್ಚರ್ಸ್ ತಂಡದ ಮಾಲೀಕರು – ಸಚಿನ್ ನಾಯಕ, ಗದಗ ಕ್ರಶರ್ಸ್ ತಂಡದ ಮಾಲೀಕರು – ಸಮೀರ ನದಿಮುಲ್ಲಾ ಸೇರಿದಂತೆ ನಾಲ್ಕು ತಂಡದ ಐಕಾನ್ ಆಟಗಾರರು ಭಾಗಿಯಾಗಿದ್ದರು.
ಹರಾಜು ಪ್ರಕ್ರಿಯೆಯಲ್ಲಿ ಆಟಗಾರರಾದ ಶಿವು ಕರಡಿ 31,000, ಶುಭಂ ಜೈನ್ 30,000, ರಾಮು ಬೆನಹಾಳ 18,000 ಅಂಕಗಳಿಗೆ ಹರಾಜಾದರು. ಟೂರ್ನಿಯು ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಬಾಹುಬಲಿ ಜೈನ್ರ್ ಹಾಗೂ ಶಶಿ ಮುಂಡರಗಿ ಕಾರ್ಯಕ್ರಮ ನಡೆಸಿಕೊಟ್ಟರು.



