ಬೃಹತ್ ತಿರಂಗಾ ಪಥಸಂಚಲನ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ನಗರದ ಎಲ್.ಆಯ್. ದಿಂಡೂರ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ತಿರಂಗಾ ಪಥಸಂಚಲನ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಶಿಧರ ಎಲ್.ದಿಂಡೂರ, ರಾಜ್ಯ ಪ್ರಕೋಷ್ಟಕಗಳ ಸಂಚಾಲಕ ಕಿರಣ ಅಣ್ಣಿಗೇರಿ, ರೋಟರಿ ಕ್ಲಬ್ ಗದಗ ಸೆಂಟ್ರಲ್ ಅಧ್ಯಕ್ಷ ಚೇತನ ಅಂಗಡಿ, ಸೆಕ್ರೆಟರಿ ರಾಜು ಉಮ್ಮಾಬಾದ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 100 ಮೀಟರ್ ತಿರಂಗಾ ದ್ವಜವನ್ನು ಪಥಸಂಚಲನದ ಮೂಲಕ ಶಾಲೆಯಿಂದ ಸೂಡಿ ಕ್ರಾಸ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಸೂಡಿ ಕ್ರಾಸ್ ವೃತ್ತದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದರ ಮೂಲಕ ಪುನಃ ಶಾಲೆಗೆ ಪಥಸಂಚಲನ ತಲುಪಿತು.

ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಕಿರಣ ಅಣ್ಣಿಗೇರಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ದೇಶ ಪ್ರೇಮ ಮೂಡಿಸುವ ವಿಶಿಷ್ಟವಾದ ಕಾರ್ಯವನ್ನು ಶಾಲೆಯಲ್ಲಿ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಶಶಿಧರ ಎಲ್.ದಿಂಡೂರ ಮಾತನಾಡುತ್ತಾ, ಇಂದು ನಮ್ಮ ಶಾಲೆ ಹಾಗೂ ರೋಣ ನಗರದಲ್ಲಿ ಒಂದು ಐತಿಹಾಸಿಕ ದಿನವನ್ನು ಆಚರಿಸಲು ಕಳೆದ ಒಂದು ವಾರದಿಂದ ತಯಾರಿ ಮಾಡಲಾಗಿತ್ತು. ಅದರಂತೆ ಇಂದು ಯಶಸ್ವಿಯಾಗಿ ತಿರಂಗಾ ಪಥಸಂಚಲನ ಅಭಿಯಾನವನ್ನು ನಡೆಸಲಾಯಿತು ಎಂದರು.

ಸೃಷ್ಟಿ ಡೊಳ್ಳಿನ ಸ್ವಾಗತಿಸಿದರು. ಮೇಘನಾ ದಲಬಂಜನ ನಿರೂಪಿಸಿದರೆ, ಸ್ಪೂರ್ತಿ ಬಳೂಟಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಿತ್ರಾ ಮಾತಾಜಿ, ಭಾರತಿ ಮಾತಾಜಿ, ಸುನಿತಾ ಮಾತಾಜಿ, ಮುತ್ತು ಗುರೂಜಿ, ರಮೇಶ ಗುರೂಜಿ, ಫಾತೀಮಾ ಮಾತಾಜಿ, ಆದಿ ಮಾತಾಜಿ, ಶ್ವೇತಾ ಮಾತಾಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ರೋಣ ನಗರದ ಆರಕ್ಷಕ ಠಾಣೆಯ ಎಲ್ಲ ಸಿಬ್ಬಂದಿಗಳು ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here