ತುಮಕೂರು: ಭಾರತ್ ಜೋಡೋ ಯಾತ್ರೆ ವೇಳೆ ದಣಿದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ದಣಿವಾರಿಸಿದ್ದ ಅಜ್ಜಿಯೊಬ್ಬರು ನಿಧನವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿಯ ಶಾರದಮ್ಮ (78) ನಿಧನರಾದ ಅಜ್ಜಿ.
Advertisement
2022ರ ಅಕ್ಟೋಬರ್‌ನಲ್ಲಿ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಭಾರತ್ ಜೋಡೋ ಯಾತ್ರೆ ಹೊರಟಿದ್ದ ಸಂದರ್ಭ ರಾಹುಲ್ ಗಾಂಧಿಗೆ ಫುಟ್‌ಪಾತ್ ವ್ಯಾಪಾರಿಯಾಗಿದ್ದ ಈ ಅಜ್ಜಿ ಸೌತೆಕಾಯಿಯನ್ನು ನೀಡಿ ದಣಿವಾರಿಸಿದ್ದರು. ಇಷ್ಟು ಮಾತ್ರವಲ್ಲದೇ ರಾಹುಲ್ ಗಾಂಧಿ ಬಳಿ ಇಂದಿರಾಗಾಂಧಿಯನ್ನು ಶಾರದಮ್ಮ ಹೊಗಳಿದ್ದರು. ಅನಾರೋಗ್ಯದ ಹಿನ್ನೆಲೆ ಶಾರದಮ್ಮ ನಿಧನರಾಗಿದ್ದಾರೆ.