ವಿಜಯಸಾಕ್ಷಿ ಸುದ್ದಿ, ಗದಗ : ಸುಮಾರು 25 ವರ್ಷಗಳಿಂದ ಬಹುಜನರ ಕನಸಾಗಿದ್ದ ಗದಗ ಜಿಲ್ಲೆಗೆ ಬೌದ್ಧವಿಹಾರ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಬಜೆಟ್‌ನಲ್ಲಿ ಅನುದಾನ ಮಂಜೂರ ಮಾಡಿಸಿದ್ದಕ್ಕಾಗಿ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಡಾ. ಎಚ್. ಕೆ. ಪಾಟೀಲರಿಗೆ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ/ವರ್ಗಗಳ ನೌಕರರ ಸಂಘದ ವತಿಯಿಂದ ಹೆಚ್.ಸಿ. ಕೊಪ್ಪಳ ನೇತೃತ್ವದಲ್ಲಿ ಬುದ್ಧ ನಮನಗಳನ್ನು ಸಲ್ಲಿಸಲಾಯಿತು.
ಬೌದ್ಧವಿಹಾರ ನಿರ್ಮಾಣದಿಂದ ಗದಗ ನಗರದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಅಮೂಲ್ಯ ಕಾಣಿಕೆಯನ್ನು ನೀಡಿದಂತಾಗಿದೆ ಹಾಗೂ ಗದುಗಿನ ಪ್ರಶಾಂತ ವಾತಾವರಣದಲ್ಲಿ ನಿರ್ಮಿಸಿ ಪರಿಸರದ ಬೆಳಗಣಿಗೆಗೂ ಪೂರಕವಾಗುವ ರೀತಿಯಲ್ಲಿ ನಿರ್ಮಿಸಬೇಕೆಂದು ಎಂದು ಸಂಘದ ಪದಾಧಿಕಾರಿಗಳು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಗಣ್ಣವರ, ಗೋವಿಂದ, ಚಂದ್ರು ಚಲವಾದಿ, ಎಸ್.ಎಸ್. ಬೇವಿನಮರದ, ಜೋಗಣ್ಣವರ, ಸಮಸ್ತ ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.