ವಿಜಯಸಾಕ್ಷಿ ಸುದ್ದಿ, ಗದಗ: ಶಹರದಲ್ಲಿರುವ ಜಿಲ್ಲಾ ಹಡಪದಅಪ್ಪಣ್ಣ ಸಮಾಜ ಸೇವಾ ಸಂಘದ ನಿಜಸುಖಿ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲರು 15 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದ ಪತ್ರವನ್ನು ವಿತರಿಸಿದರು.
Advertisement
ಈ ಸಂದಂರ್ಭದಲ್ಲಿ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಯುವ ನಾಯಕ ಕೃಷ್ಣಗೌಡ ಎಚ್.ಪಾಟೀಲ, ಸಿದ್ದನಗೌಡ ಪಾಟೀಲ, ಪ್ರಭು ಬುರಬುರೆ, ಬಿ.ಬಿ. ಅಸೂಟಿ ಮುಂತಾದವರಿದ್ದರು. ಸಮಾಜದ ಜಿಲ್ಲಾಧ್ಯಕ್ಷರಾದ ಮೋಹನ ಚಂದಪ್ಪನವರ, ಜಿಲ್ಲಾ ಕಾರ್ಯದರ್ಶಿ ಎ.ವಿ. ಪ್ರಭು, ಉಪಾಧ್ಯಕ್ಷ ಕಲ್ಲೇಶಪ್ಪ ಕುಡಗುಂಟಿ, ನಿರ್ದೇಶಕರಾದ ಪುಟ್ಟರಾಜ ಹಾಲಕೇರಿ, ಜಗದೀಶ ಹಡಪದ, ವಿರೂಪಾಕ್ಷಿ ಮುಗತೂರ, ಅಕ್ಷಯ ಅಣ್ಣಿಗೇರಿ, ಸತೀಶ ಹಡಪದ ಮೊದಲಾದವರು ಹಾಜರಿದ್ದರು.


