ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ ಯಜ್ಞೋಪವೀತ ಸಮಾಜ ಬಾಂಧವರು ಗಜೇಂದ್ರಗಡ ರಸ್ತೆಯಲ್ಲಿ ನಿರ್ಮಿಸಿರುವ ಮುಕ್ತಿಧಾಮವು ಶಿಥಿಲಾವಸ್ಥೆಗೆ ತಲುಪಿದ್ದು, ಅದರ ಜೀರ್ಣೋದ್ಧಾರಕ್ಕೆ ಅವಶ್ಯವಿರುವ ಅನುದಾನವನ್ನು ಒದಗಿಸುವೆ ಎಂದು ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.
ಮುಕ್ತಿಧಾಮ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಶಾಸಕರು ಮಾತನಾಡಿದರು.
ಸಮಿತಿಯ ಅಧ್ಯಕ್ಷ ಗುರುರಾಜ ಕುಲಕರ್ಣಿ ಮಾತನಾಡಿ, ಗಜೇಂದ್ರಗಡ ರಸ್ತೆಯಲ್ಲಿ ಯಜ್ಞೋಪವಿತ ಸಮಾಜದ ಸ್ಮಶಾನವಿದೆ. ಈ ಹಿಂದೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಟ್ರಸ್ಟ್ನ ಸಹಾಯದಿಂದ ಅದನ್ನು ಅಭಿವೃದ್ಧಿಪಡಿಸಿದ್ದೇವೆ. ಅಂದು ಬಾಗಲಕೋಟೆ ಸಂಸದರಾಗಿದ್ದ ಆರ್.ಎಸ್. ಪಾಟೀಲರೂ ಅನುದಾನ ನೀಡಿ ಅದರ ಅಭಿವೃದ್ಧಿಗೆ ಕಾರಣರಾಗಿದ್ದರು. ಈಗ ಸ್ಮಶಾನವು ಶಿಥಿಲಾವಸ್ಥೆಗೆ ತಲುಪಿದ್ದು, ಅಂತ್ಯ ಸಂಸ್ಕಾರಕ್ಕೆ ಹೋಗಲು ತೊಂದರೆ ಆಗುತ್ತಿದೆ. ತಮ್ಮ ಅನುದಾನದಲ್ಲಿ 5 ಲಕ್ಷ ರೂ ಬಿಡುಗಡೆ ಮಾಡಿಸಿ ಸ್ಮಶಾನ ದುರಸ್ತಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಖಜಾಂಚಿ ವಿನಾಯಕ ಗ್ರಾಮಪುರೋಹಿತ, ದತ್ತಭಕ್ತ ಮಂಡಳಿ ಅಧ್ಯಕ್ಷ ಡಾ. ಎನ್.ಎಲ್. ಗ್ರಾಮಪುರೋಹಿತ, ಕಾರ್ಯದರ್ಶಿ ರಘುನಾಥ ಕೊಂಡಿ, ನಾರಾಯಣಪ್ಪ ವಡ್ಡಟ್ಟಿ, ಮುತ್ತಣ್ಣ ಹೂಲಗೇರಿ, ಶೇಷಗಿರಿರಾವ ಕುಲಕರ್ಣಿ, ಎ.ಜಿ. ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಅರುಣ ಕುಲಕರ್ಣಿ, ಆನಂದ ಕುಲಕರ್ಣಿ, ನಾಗೇಶ್‌ಭಟ್ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಹರೀಶ ಕುಲಕರ್ಣಿ, ಆದರ್ಶ ಕುಲಕರ್ಣಿ, ಪ್ರಕಾಶ ಕಾಳೆ ಸೇರಿದಂತೆ ಯಜ್ಞೋಪವಿತ ಸಮಾಜದ ಸದಸ್ಯರು ಇದ್ದರು.