ವಿಜಯಸಾಕ್ಷಿ ಸುದ್ದಿ, ಗದಗ: 2006-07ರಲ್ಲಿ ಅಂದಿನ ರಾಜ್ಯ ಸರ್ಕಾರ ವಿತರಿಸಿರುವ ಭಾಗ್ಯಲಕ್ಷ್ಮೀ ಬಾಂಡ್ ಮೆಚ್ಯುರಿಟಿ ಆದರೂ ಸಹ ನೂರಾರು ಫಲಾನುಭವಿಗಳಿಗೆ ಹಣ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ ಮಾತನಾಡಿ, ಕರ್ನಾಟಕ ಸರ್ಕಾವು ರಾಜ್ಯದಲ್ಲಿ ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬಗಳಲ್ಲಿ ಜನಸಿರುವ ಹೆಣ್ಣು ಮಗುವಿಗಾಗಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಮಾರ್ಚ್ 31, 2006ರ ನಂತರ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ಯೋಜನೆ ಅನುಕೂಲಕರವಾಗಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿಲ್ಲಿ ಗದಗ ಜಿಲ್ಲೆಯಲ್ಲಿ ಈವರೆಗೊ ಸಾವಿರಾರು ಕುಟುಂಬಗಳು ತಮ್ಮ ಹೆಣ್ಣು ಮಗುವಿನ ನೋಂದಣಿ ಮಾಡಿಸಿ ಬಾಂಡ್‌ಗಳನ್ನು ಪಡೆದುಕೊಂಡಿದ್ದಾರೆ.
ಈಗ ಬಾಂಡ್ ಮೆಚ್ಯುರಿಟಿ ಆಗಿರುವ ಫಲಾನುಭವಿಗಳು ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲಾಖೆಗಳಿಗೆ ಹೋಗಿ ವಿಚಾರಿಸಿದರೆ, ಇಲ್ಲದ ಕಾರಣಗಳನ್ನು ನೀಡಿ, ಹಣ ನೀಡಲು ಬರುವುದಿಲ್ಲ ಎಂದು ಅಲೆದಾಡಿಸುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು 2006-07ರಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಿ, ಈಗ ಅವಧಿ ಮುಗಿದಿರುವ ಬಾಂಡ್ ಫಲಾನುಭವಿಗಳಿಗೆ ಯಾವುದೇ ಸುಳ್ಳು ಕಾರಣಗಳನ್ನು ನೀಡದೇ ಹಣವನ್ನು ಮಂಜೂರು ಮಾಡಲು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭಲ್ಲಿ ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಮುಖಂಡರಾದ ಮೆಹರುನಿಸಾ ಡಂಬಳ, ಪ್ರೇಮಾ ಮಣ್ಣವಡ್ಡರ, ಮೈಮುನ ಬೈರಕದಾರ, ಮೆಹರುನಿಸಾ ಢಾಲಾಯತ, ಚಂದ್ರವ್ವ ಬಿಂಕದಕಟ್ಟಿ, ಲಕ್ಷ್ಮೀ ಮಣ್ಣವಡ್ಡರ, ನಜಮುನಿಸಾ ಮುರಗೋಡ, ಉಮಾ ಬಡಿಗೇರ, ಜುಬೇದಾ ಯಾದಗೇರಿ ಮುಂತಾದವರು ಉಪಸ್ಥಿತರಿದ್ದರು.