HomePolitics Newsಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಸ್ಥಗಿತ ಆಗಲು ಸಾಧ್ಯವಿಲ್ಲ: ಹೆಚ್ ಸಿ ಮಹದೇವಪ್ಪ

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಸ್ಥಗಿತ ಆಗಲು ಸಾಧ್ಯವಿಲ್ಲ: ಹೆಚ್ ಸಿ ಮಹದೇವಪ್ಪ

For Dai;y Updates Join Our whatsapp Group

Spread the love

ದಾವಣಗೆರೆ: ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಸ್ಥಗಿತ ಆಗಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಸ್ಥಗಿತ ಆಗಲು ಸಾಧ್ಯವಿಲ್ಲ. ಬಜೆಟ್​ನಲ್ಲಿ ಅನುದಾನ ನೀಡಿರುವುದು, ಮಂಜೂರು ಆಗೇ ಆಗುತ್ತೆ, ಬಿಡುಗಡೆ ಆಗದೇ ಇರಬಹುದು. ಸ್ಥಗಿತ ಆಗಲು ಸಾಧ್ಯವಿಲ್ಲ, ಇಲಾಖೆವಾರು ಅನುದಾನ ಬಿಡುಗಡೆ ಆಗುತ್ತೆ ಎಂದು ತಿಳಿಸಿದರು.

ಅಂಬೇಡ್ಕರ್ ವಸತಿ ಶಾಲೆಗಳು ಗೋದಾಮ್​ನಲ್ಲಿ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕ್ರೈಸ್​ನಲ್ಲಿ 821 ವಸತಿ ಶಾಲೆಗಳಿವೆ, 600 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿವೆ. 200 ಶಾಲೆ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತೆ. ಎಲ್ಲೆಲ್ಲಿ ಬಾಡಿಗೆ ನಡೆಸಲಾಗುತ್ತೆ, ಅಲ್ಲಿ ನಮಗೆ 36 ಕಡೆ ಜಾಗ ಇದ್ದು ಅಲ್ಲಿ ಕಟ್ಟುತ್ತೇವೆ. ಜಾಗ ಇಲ್ಲದ ಕಡೆ ಜಾಗ ಒದಗಿಸಿಕೊಂಡು ಕಟ್ಟುತ್ತೇವೆ ಎಂದು ಹೇಳಿದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!