IPL 2025ರ ಹರಾಜಿನಲ್ಲಿ ಯಾರು ಊಹಿಸದ ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಖರೀದಿ ಮಾಡಿದೆ.
ಮುಂದಿನ ಸೀಸನ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ.
ಹರಾಜಿನಲ್ಲಿ ಆರ್ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾರನ್ನು ಬರೋಬ್ಬರಿ 11 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಹೀಗಾಗಿ ಆರ್ಸಿಬಿ ತಂಡದ ಫಿನಿಷರ್ ಸ್ಥಾನವನ್ನು ಜಿತೇಶ್ ಶರ್ಮಾ ನಿಭಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಜಿತೇಶ್ ಶರ್ಮಾ, ಆರ್ಸಿಬಿ ನನ್ನನ್ನು ಖರೀದಿ ಮಾಡಿದಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ. ಹರಾಜಿನ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಉತ್ತಮ ತಂಡ ಸೇರುತ್ತೇನೆ ಅನ್ನೋ ವಿಶ್ವಾಸವಿತ್ತು. ಆರ್ಸಿಬಿ ನನ್ನನ್ನು ಖರೀದಿ ಮಾಡಿದ್ದು ಖುಷಿ ಹೆಚ್ಚಿಸಿದೆ ಎಂದರು.
ನನಗೆ ಯಾವುದೇ ನಿರೀಕ್ಷೆಗಳು ಇಲ್ಲ. ಆರ್ಸಿಬಿ ತಂಡಕ್ಕಾಗಿ ಮುಕ್ತವಾಗಿ ಬ್ಯಾಟ್ ಬೀಸುವ ಮತ್ತು ನನ್ನ ಸಾಮರ್ಥ್ಯ ಪ್ರೂವ್ ಮಾಡೋ ಆಸೆ ಇದೆ. ನನ್ನನ್ನು ಖರೀದಿ ಮಾಡಿದ ಆರ್ಸಿಬಿಗೆ ಕೃತಜ್ಞ. ವಿರಾಟ್ ಕೊಹ್ಲಿ ಜೊತೆ ಆಡಲು ನಾನು ಕಾಯುತ್ತಿದ್ದೇನೆ. ಅವರಿಂದ ಕಲಿಯುವುದು ಬಹಳಷ್ಟಿದೆ ಎಂದರು.