ಬೆಳಗಾವಿ: ಯಾವುದೇ ಯೋಜನೆಗೆ ಹಣ ನೀಡ್ತಿಲ್ಲ ‘ಗ್ರೇಟ್ ಎಕಾನಾಮಿಸ್ಟ್ ಸಿದ್ದರಾಮಯ್ಯ’ ಎಂದು ವಿಧಾನಪರಿಷತ್ ಬಿಜೆಪಿ ಶಾಸಕ ಸಿ.ಟಿ ರವಿ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್, ಬಸ್ ದರ ಸೇರಿದಂತೆ ಎಲ್ಲ ದರಗಳಲ್ಲಿಯೂ ಏರಿಕೆ ಮಾಡಲಾಗಿದೆ. ತೆರಿಗೆ ಮೇಲೆ ತೆರಿಗೆ ಹಾಕಲಾಗಿದೆ ಎಂದು ಕಿಡಿಕಾರಿದರು.
ಎಲ್ಲೆಲ್ಲಿ ತೆರಿಗೆ ಹಾಕಬೇಕೋ, ಅಲ್ಲಿ ತೆರಿಗೆ ಹಾಕ್ತಿದ್ದಾರೆ ಗ್ರೇಟ್ ಎಕನಾಮಿಸ್ಟ್ ಸಿಎಂ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು. ಔರಂಗಜೇಬ್ ಹಿಂದೂಗಳ ಮೇಲೆ ಜಿಜಿಯಾ ಎಂದು ತೆರಿಗೆ ಹಾಕ್ತಿದ್ರು. ಇದೀಗ ಸಿದ್ದರಾಮಯ್ಯ ಕೂಡಾ ಹಾಗೇ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಭಿವೃದ್ಧಿಗೆ ಹಣ ಕೊಡಿ ಎಂದು ಬಿಜೆಪಿ ಶಾಸಕರಲ್ಲ, ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರೇ ಅಂಗಲಾಚಿದ್ದಾರೆ. ಸರ್ಕಾರದ ಪರಿಸ್ಥಿತಿ ದುಸ್ಥಿತಿಯಾಗಿದೆ. ಖಜಾನೆ ಖಾಲಿ, ಅಭಿವೃದ್ಧಿ ಗೋತಾ ಎಂದು ಲೇವಡಿ ಮಾಡಿದರು. ಅಂತ್ಯ ಸಂಸ್ಕಾರಕ್ಕೆ ನೀಡುತ್ತಿದ್ದ ಐದು ಸಾವಿರ ರೂಪಾಯಿ ಸಹಾಯ ಧನ ನಿಲ್ಲಿಸಿದ್ದಾರೆ. ಯಾವುದೇ ಯೋಜನೆಗೆ ಹಣ ನೀಡ್ತಿಲ್ಲ ‘ಗ್ರೇಟ್ ಎಕಾನಾಮಿಸ್ಟ್ ಸಿದ್ದರಾಮಯ್ಯ’ ಎಂದು ಸಿಟಿ ರವಿ ಕಿಡಿಕಾರಿದರು.