ಬೆಂಗಳೂರು: ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಚಿನ್ನದ ಬೆಲೆ ಏರಿಕೆ ಯಾವಾಗ ನಿಲ್ಲುತ್ತದೆ ಅಥವಾ ಕಡಿಮೆಯಾಗುತ್ತದೆ ಎಂದು ಹೇಳುವುದು ಕಷ್ಟವಾಗಿದೆ. ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಚಿನ್ನವನ್ನು ವಿಶ್ವದ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು. ನಿಧಾನವಾಗಿ ಕುಸಿತ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆ ಕಾಣಲು ಆರಂಭಿಸಿತ್ತು.
ನಿನ್ನೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ 8,985 ರೂಪಾಯಿ ಇತ್ತು. ಇದು ಇಂದು 8,930 ಇದ್ದು 55 ರೂಪಾಯಿ ಇಳಿಕೆ ಆಗಿದೆ. ನಿನ್ನೆ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 89,850 ರೂಪಾಯಿ ಇತ್ತು. ಇಂದು 89,300 ಆಗಿದ್ದು ಬರೋಬ್ಬರಿ 550 ರೂಪಾಯಿ ಕಡಿಮೆ ಆಗಿದೆ. ನಿನ್ನೆ 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 9,802 ರೂಪಾಯಿ ಇತ್ತು. ಇಂದು 9,742 ರೂಪಾಯಿ ಆಗಿದೆ. ಬೆಲೆಯಲ್ಲಿ 60 ಕಡಿಮೆ ಆಗಿದೆ. ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 98,020 ರೂಪಾಯಿ ಇತ್ತು. ಇಂದು 97,420 ರೂಪಾಯಿ ಆಗಿದೆ. ಬೆಲೆಯಲ್ಲಿ 600 ಇಳಿಕೆ ಆಗಿದೆ.
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹107.80 ಇದೆ. ಇದು ನಿನ್ನೆ ₹107.90 ಇತ್ತು. ಬೆಲೆಯಲ್ಲಿ 10 ಪೈಸೆ ಕಡಿಮೆ ಆಗಿದೆ. ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹1,078 ಇದ್ದು ನಿನ್ನೆ ಇದರ ಬೆಲೆ ₹1,079 ಇತ್ತು. ಹೀಗಾಗಿ ಬೆಳ್ಳಿಯ ಬೆಲೆಯಲ್ಲಿ 1 ರೂಪಾಯಿ ಇಳಿಕೆ ಆಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಅಹಮದಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನ ₹89,350 ಇದೆ
- ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹89,450 ಇದೆ.
- ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹89,300 ಇದೆ.
- ಬಳ್ಳಾರಿಯಲ್ಲಿ 22 ಕ್ಯಾರೆಟ್ ಚಿನ್ನ ₹89,300 ಇದೆ.