ಚಿನ್ನ ಖರೀದಿ ಅಂದರೆ ಅದ್ಯಾಕೋ ಭಯವಾಗ್ತಿದೆ, ಕಾರಣ ಏರುತ್ತಿರುವ ಬೆಲೆ. ಒಂದು ಗ್ರಾಂಗೆ ಏಳು ಸಾವಿರ ಇದ್ದ ಚಿನ್ನ ಎಂಟು ಸಾವಿರ ಬಂದು ತಲುಪಿದೆ. ಈ ಬೆಲೆ ನೋಡುತ್ತಿದ್ದರೆ, ಈ ವರ್ಷ ಬಂಗಾರದ ದರ ಊಹಿಸದ ರೀತಿಯಲ್ಲಿ ಹೆಚ್ಚಾಗುತ್ತದೆ ಎಂಬ ವರದಿಗಳು ನಿಜ ಎಂಬ ಅನುಮಾನ ಹೆಚ್ಚಾಗುತ್ತಿದೆ. ಮದುವೆ ಸೀಸನ್ ಬಂದಿದ್ದೇ ಬಂದಿದ್ದು ಬೆಳ್ಳಿ, ಬಂಗಾರ ಎರಡರ ದರವೂ ಹೆಚ್ಚಾಗಿ, ಗ್ರಾಹಕರ ಕೈ ಸುಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ.
ಹೌದು ಇಂದು ಸೋಮವಾರಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. 8,230 ರೂ ಇದ್ದ 22 ಕ್ಯಾರಟ್ ಚಿನ್ನದ ಬೆಲೆ 8,215 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 8,962 ರೂಗೆ ಇಳಿದಿದೆ. ವಿದೇಶಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರುಪೇರಾಗಿಲ್ಲ. ಭಾರತದಲ್ಲಿ ಮಾತ್ರ ತುಸು ಬೆಲೆ ತಗ್ಗಿರುವುದು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 89,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 82,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,100 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 24ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,150 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,620 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,220 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,150 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,620 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 82,150 ರೂ
- ಚೆನ್ನೈ: 82,150 ರೂ
- ಮುಂಬೈ: 82,150 ರೂ
- ದೆಹಲಿ: 82,300 ರೂ
- ಕೋಲ್ಕತಾ: 82,150 ರೂ
- ಕೇರಳ: 82,150 ರೂ
- ಅಹ್ಮದಾಬಾದ್: 82,200 ರೂ
- ಜೈಪುರ್: 82,300 ರೂ
- ಲಕ್ನೋ: 82,300 ರೂ
- ಭುವನೇಶ್ವರ್: 82,150 ರೂ