ಗದಗ: ಲಕ್ಕುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದರಫೀಕ ಹುಬ್ಬಳ್ಳಿ ನೆರವೇರಿಸಿದರು. ಮುಸಲ್ಮಾನ ಗೆಳೆಯರ ಬಳಗವು ಕೊಡುಗೆ ನೀಡಿದ ತೆಂಗು, ದಾಳಿಂಬೆ, ಲಿಂಬು ಹಣ್ಣಿನ ಸಸಿಗಳನ್ನು ಶಾಲೆಯ ಆವರಣದಲ್ಲಿ ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಪ್ರಧಾನ ಗುರು ಎ.ಎನ್. ನರೇಗಲ್, ಸಹ ಶಿಕ್ಷಕ ಎಚ್.ಎಂ. ನದಾಫ್, ಸಕ್ರುಸಾಬ ನದಾಫ್, ಶಮೀರ ಹಿರೇಮನಿ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ಹಾಜರಿದ್ದರು.
Trending Now



