ಬಾಗಲಕೋಟೆ:– ತಾಲ್ಲೂಕಿನ ಹೊಸಮುರನಾಳ ಗ್ರಾಮದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಮುಸ್ಲಿಂ ಯುವಕನೋರ್ವ ಹಸಿರು ಧ್ವಜ ತಂದು ಗಲಾಟೆ ಸೃಷ್ಟಿಸಿರುವ ಘಟನೆ ಜರುಗಿದೆ.
ಗಲಾಟೆ ಬಳಿಕ ಹಿಂದೂ ಯುವಕನಿಗೆ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಗ್ರಾಮದಲ್ಲಿ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ 21 ವರ್ಷದ ಆಸಿಪ್ ಬೆಳಗಾಂವಕರ್(21) ಎನ್ನುವ ಯುವಕ ಹಸಿರು ಧ್ವಜ ತಂದಿದ್ದಾನೆ. ಇದಕ್ಕೆ ಹಿಂದೂ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ 22 ವರ್ಷದ ನವೀನ ಕೂಡ್ಲೆಪ್ಪನವರ(22) ಎನ್ನುವ ಯುವಕನಿಗೆ ಚಾಕುವಿನಿಂದ ಇರಿದಿದ್ದಾನೆ.
ಘಟನೆಯಲ್ಲಿ ಗಾಯಗೊಂಡ ನವೀನ್ ಸದ್ಯ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಲಾದಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.



