HomeIndia Newsಎತ್ತಿನಹೊಳೆ ಪ್ರಾಜೆಕ್ಟ್ʼಗೆ ಗ್ರೀನ್ ಸಿಗ್ನಲ್: ಕೇಂದ್ರ ಸರ್ಕಾರ ಒಪ್ಪಿಗೆ

ಎತ್ತಿನಹೊಳೆ ಪ್ರಾಜೆಕ್ಟ್ʼಗೆ ಗ್ರೀನ್ ಸಿಗ್ನಲ್: ಕೇಂದ್ರ ಸರ್ಕಾರ ಒಪ್ಪಿಗೆ

For Dai;y Updates Join Our whatsapp Group

Spread the love

ನವದೆಹಲಿ: ಎತ್ತಿನಹೊಳೆ ಯೋಜನೆಗೆ ಹಾಸನ ಮತ್ತು ತುಮಕೂರು ಜಿಲ್ಲೆಗಳ 277 ಎಕರೆ ಅರಣ್ಯ ಭೂಮಿಯನ್ನು ಬಳಸಲು ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಷರತ್ತುಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ತಾತ್ವಿಕ ಅನುಮೋದನೆ ನೀಡಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಅರಣ್ಯ ಸಂರಕ್ಷಣಾ ವಿಭಾಗ) ಈ ಕುರಿತು ಮಾಹಿತಿ ನೀಡಿದ್ದು, ಯೋಜನೆ ಮುಂದುವರಿಸಲು ಒಟ್ಟು 34 ಷರತ್ತುಗಳನ್ನು ವಿಧಿಸಿದೆ. ಇದರಿಂದಾಗಿ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಯೋಜನೆ ಕಾಮಗಾರಿಗೆ ಮತ್ತೆ ಚಾಲನೆ ಸಿಗುವ ನಿರೀಕ್ಷೆಯಿದೆ.

ಕೇಂದ್ರದ ಪ್ರಮುಖ ಷರತ್ತುಗಳು:

  • ಅರಣ್ಯ ಅನುಮತಿ ಇಲ್ಲದೇ ಈಗಾಗಲೇ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
  • ಅಕ್ರಮವಾಗಿ ಬಳಸಿದ ಅರಣ್ಯ ಭೂಮಿಯ ಮೌಲ್ಯದ ಆರು ಪಟ್ಟು ದಂಡ ಪಾವತಿಸಬೇಕು.
  • ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಕಾಮಗಾರಿ ನಡೆಸಬೇಕು.
  • ಬಳಸುವ ಅರಣ್ಯ ಭೂಮಿಗೆ ಸಮನಾಗಿ ಅರಣ್ಯೇತರ ಭೂಮಿಯಲ್ಲಿ ಪರಿಹಾರ ಅರಣ್ಯೀಕರಣ (Compensatory Afforestation) ಮಾಡಬೇಕು.
  • ಅರಣ್ಯೇತರ ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿ, ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕು.
  • CAMPA ಖಾತೆಗೆ ಪರಿಹಾರ ಅರಣ್ಯೀಕರಣ ವೆಚ್ಚವನ್ನು ಜಮಾ ಮಾಡಬೇಕು ಹಾಗೂ ಕನಿಷ್ಠ 10 ವರ್ಷ ನಿರ್ವಹಣೆ ಮಾಡಬೇಕು.

ಇತರೆ ನಿಯಮಗಳು:
ಯೋಜನೆಗಾಗಿ ಬಳಸುವ ಒಟ್ಟು ಅರಣ್ಯ ಭೂಮಿಯ ಪ್ರಮಾಣ 111.0277 ಹೆಕ್ಟೇರ್ ಮೀರಬಾರದು. ಅರಣ್ಯ ಪ್ರದೇಶದಲ್ಲಿ ಹೊಸ ರಸ್ತೆ ನಿರ್ಮಾಣ ಅಥವಾ ಕಾರ್ಮಿಕ ಶಿಬಿರ ಸ್ಥಾಪನೆಗೆ ಅವಕಾಶ ಇಲ್ಲ. ಮರಗಳನ್ನು ಕಡಿಯುವುದು ಅಗತ್ಯವಿದ್ದಲ್ಲಿ ಮಾತ್ರ, ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಮಾಡಬೇಕು.

ಅಲ್ಲದೆ, ಸಸ್ಯ-ಪ್ರಾಣಿ ಜೀವಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಡಿಸೆಂಬರ್ 31ರಂದು ಷರತ್ತುಗಳ ಅನುಸರಣೆ ಬಗ್ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಈ ಷರತ್ತುಗಳಲ್ಲಿ ಯಾವುದೇ ಉಲ್ಲಂಘನೆ ನಡೆದರೆ, ಅದು ಅರಣ್ಯ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!