ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಇಲ್ಲಿನ ಎಪಿಎಮ್‌ಸಿ ಮಾರುಕಟ್ಟೆ ಪ್ರಾಂಗಣದಲ್ಲಿ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಕೇಂದ್ರವನ್ನು ಪ್ರಾರಂಬಿಸಲಾಯಿತು. ರೈತರಿಂದ ಶೇಂಗಾ ಪ್ರತಿ ಕ್ವಿಂಟಲ್ ಗೆ 6783 ರೂಪಾಯಿ ಬೆಂಬಲ ಬೆಲೆಯಡಿ ಖರೀದಿಸಲಿದೆ. ಖರೀದಿಯನ್ನು ಪ್ರತಿ ರೈತರಿಂದ 15 ಕ್ವಿಂಟಾಲ್, ಪ್ರತಿ ಒಂದು ಎಕರೆಗೆ 3 ಕ್ವಿಂಟಾಲ್‌ನAತೆ ಖರೀದಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಕಲಕೇರಿ ಓಜಿಸಿಎಸ್‌ನ ಅಧ್ಯಕ್ಷ ವೆಂಕಪ್ಪ ಹುಳಕಣ್ಣವರ, ಮುಂಡರಗಿ ಟಿಎಪಿಸಿಎಂಎಸ್ ಅಧ್ಯಕ್ಷ ಮುದುಕನಗೌಡ ಎಸ್.ಪಾಟೀಲ, ಕಲಕೇರಿ ಪಿಎಸಿಎಸ್‌ನ್‌ನ ಅಧ್ಯಕ್ಷ ಶಿವನಗೌಡ ಡೋಣಿ, ಗದಗ ವಿಭಾಗ ಮಟ್ಟದ ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ಪಾಟೀಲ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಜೆ, ಓಜಿಸಿಎಸ್‌ನ ಕಾರ್ಯದರ್ಶಿ ರಾಜಾಭಕ್ಷಿ ಹರ್ಲಾಪೂರ, ರೈತರಾದ ನಿಂಗಪ್ಪ ಬಡಾಲಿ, ಮಂಜಪ್ಪ ಚಿಕ್ಕವಡ್ಡಟ್ಟಿ, ಬಸವರಾಜ್ ರೆಡ್ಡರ್, ಈರಣ್ಣ ಹುಳಕಣ್ಣವರ, ಪಕ್ಕಿರಯ್ಯ ಇಟಗಿಮಠ, ಶೇಕಯ್ಯ ಕೋಡಿಹಳ್ಳಿ, ಹುಚ್ಚಯ್ಯ ಕೋಡಿಹಳ್ಳಿ, ಮುದಕಯ್ಯ ಇಟಗಿಮಠ, ಟಎಪಿಸಿಎಂಎಸ್‌ನ ಕಾರ್ಯದರ್ಶಿ ಎಸ್.ಎಂ. ತಳಕಲ್ಲ, ಸಿಬ್ಬಂದಿಗಳಾದ ಬಸವರಾಜ್ ಯಲಿಗಾರ, ಹೆಚ್.ಕೆ. ಬೆಳಗಟ್ಟಿ, ಐ.ವಿ. ಪುರಾಣಿಕಮಠ ಮುಂತಾದವರಿದ್ದರು.