ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕೇಂದ್ರ ಸರಕಾರ ಜಿಎಸ್‌ಟಿ ತೆರಿಗೆ ಸರಳೀಕರಣಗೊಳಿಸಿರುವುದನ್ನು ಹಿರೆಅಳಗುಂಡಿಯ ಚನ್ನು ಪಾಟೀಲ ಫೌಂಡೇಷನ್‌ನ ಸಂಸ್ಥಾಪಕ ಉಮೇಶ ಪಾಟೀಲ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನಸಾಮಾನ್ಯರ ಬದುಕಿನ ಬವಣೆಗಳನ್ನು ಕಂಡ ನೆಚ್ಚಿನ ಪ್ರಧಾನಿ ಈ ತೆರಿಗೆ ಸರಳಿಕರಣಕ್ಕೆ ಸೂಚಿಸಿದ್ದು, ಇದು ಭಾರತೀಯರ ಪಾಲಿಗೆ ದೀಪಾವಳಿಯ ದೊಡ್ಡ ಕಾಣಿಕೆಯಾಗಿದೆ. ತೆರಿಗೆ ಸರಳೀಕರಣದ ಲಾಭವು ಜನತೆಗೆ ಈ ಸಾರೆಯ ದಸರೆಗೆ ಕೇಂದ್ರ ಸರಕಾರ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಈ ಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮುಖಂಡರು ಸ್ವಾಗತಿಸಿರುವುದು ಉತ್ತಮ ಬೆಳವಣಿಗೆ. ಮೋದಿಯವರ ಇಂತಹ ಅನೇಕ ಕ್ರಾಂತಿಕಾರಕ ನಿರ್ಧಾರಗಳಿಂದಲೇ ದೇಶವಿಂದು ಆರ್ಥಿಕತೆಯಲ್ಲಿ ಜಗತ್ತಿನ ದೊಡ್ಡಣ್ಣ ಅಮೆರಿಕಕ್ಕೂ ಸೆಡ್ಡು ಹೊಡೆಯುವಂತೆ ಬೆಳೆದು ನಿಂತಿರುವುದು ಭಾರತೀಯರೆಲ್ಲರೂ ಹೆಮ್ಮೆ ಮತ್ತು ಅಭಿಮಾನ ಪಡಬೇಕಾದ ವಿಷಯವಾಗಿದೆ ಎಂದು ಉಮೇಶ ಪಾಟೀಲ ತಿಳಿಸಿದ್ದಾರೆ.