ಗ್ಯಾರಂಟಿ ಎಫೆಕ್ಟ್: ವಾಹನ ಮಾಲೀಕರಿಗೆ ಬಿಗ್ ಶಾಕ್: ಡೀಸೆಲ್‌ ದರ 2 ರೂ. ಏರಿಕೆ!

0
Spread the love

ಬೆಂಗಳೂರು:- ಸತತ ದರ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಗ್ಯಾರಂಟಿ ಸರ್ಕಾರ ಮತ್ತೊಂದು ಬರೆ ಎಳೆದಿದೆ. ಹಾಲು, ಮೊಸರು, ನೀರು, ವಿದ್ಯುತ್, ಮೆಟ್ರೋ, ಬಸ್.. ಹೀಗೆ ಎಲ್ಲದರ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರವು, ಇದೀಗ ಡೀಸೆಲ್ ಬೆಲೆ 2ರೂ ಏರಿಕೆ ಮಾಡಿ ವಾಹನ ಮಾಲೀಕರಿಗೆ ಬಿಗ್ ಶಾಕ್ ಕೊಟ್ಟಿದೆ.

Advertisement

ರಾಜ್ಯದಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ 88.93 ರೂ. ದರವಿದೆ. ಈಗ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು 2 ರೂ. ಏರಿಕೆ ಮಾಡಿದ್ದರಿಂದ ದರ 90.93 ರೂ.ಗೆ ಏರಿಕೆಯಾಗಲಿದೆ. ಪೆಟ್ರೋಲ್‌ ಮೇಲೆ ಮಾರಾಟ ತೆರಿಗೆಯನ್ನು ಏರಿಸದ ಕಾರಣ ಪ್ರತಿ ಲೀಟರ್‌ ಪೆಟ್ರೋಲ್‌ ದರ 102. 84 ರೂ. ಇರಲಿದೆ.

ಸರಕು ಸಾಗಾಣಿಕೆ ಮಾಡುವ ವಾಹನಗಳಾದ ಟ್ರಕ್‌, ಲಾರಿಗಳು ಡೀಸೆಲ್‌ ಬಳಸುವ ಕಾರಣ ಮುಂದಿನ ದಿನಗಳಲ್ಲಿ ಇದರ ನೇರ ಪರಿಣಾಮ ದಿನ ಬಳಕೆಯ ವಸ್ತುಗಳ ಮೇಲೆ ತಟ್ಟಲಿದೆ. ಇದರಿಂದಾಗಿ ದಿನ ಬಳಕೆ ತರಕಾರಿ, ಆಹಾರ ವಸ್ತುಗಳ ಬೆಲೆಯೂ ಏರಿಕೆ ಆಗಲಿದೆ.

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುವ ಜನತೆಗೆ ಕಾಂಗ್ರೆಸ್‌ ಸರ್ಕಾರ ಮತ್ತೊಂದು ಶಾಕ್‌ ನೀಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.


Spread the love

LEAVE A REPLY

Please enter your comment!
Please enter your name here