ಗದಗ: ಗ್ಯಾರಂಟಿಗಳನ್ನ ಕಡಿಮೆಗೊಳಿಸುವುದು ಹಾಗೂ ಕೆಲ ವರ್ಗಕ್ಕೆ ತಪ್ಪಿಸುವ ಪ್ರಸ್ತಾಪ ಇಲ್ಲ ಎಂದು ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಜಿಎಸ್ ಟಿ ಹೊಂದಿದವರು, ಇನ್ ಕಮ್ ಟ್ಯಾಕ್ಸ್ ಕಟ್ಟುವವರು ಗ್ಯಾರಂಟಿ ಕೊಡಬಾರದು ಅಂತಾ ಮಾಡಿದ್ದೇವೆ. ತಪ್ಪಿಸಿ, ನುಸುಳಿ ಬಂದವರನ್ನ ತೆಗೆಯುವ ವ್ಯವಸ್ಥೆ ಸದ್ಯದ ನಿಯಮಗಳಲ್ಲಿ ಇದೆ ಅಷ್ಟೆ. ಕೆಲವರು ಅಪಪ್ರಚಾರ ಮಾಡ್ತಿದ್ದಾರೆ. ಆದ್ರೆ ಗ್ಯಾರಂಟಿ ಯೋಜನೆ ಬಂದ್ ಆಗಲ್ಲ.. ಬಂದ್ ಮಾಡೋದಕ್ಕೆ ಯಾವುದೇ ಕಾರಣ ಇಲ್ಲ ಎಂದು ಹೇಳಿದರು.
ಇನ್ನೂ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತಿ ಕಾನೂನಾತ್ಮಕವಾಗಿ ಚುನಾವಣೆ ಮಾಡಬೇಕು. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ಮಾಡೋದಕ್ಕೆ ಹೆಜ್ಜೆ ಇಡುತ್ತೇವೆ.
ಈಗಾಗಲೇ ಮೀಸಲಾತಿ ಕುರಿತು ಸಾಕಷ್ಟು ಚರ್ಚೆಯಾಗಿದೆ.. ಈ ಬಗ್ಗೆ ಸರ್ಕಾರ ಚಿಂತನೆ ಮಾಡ್ತಿದೆ. ಆದಷ್ಟು ಬೇಗ ಘೋಷಣೆ ಮಾಡ್ತೀವಿ ಎಂದರು.
ಮೈಸೂರು ದಸರಾ ಈ ಬಾರಿ ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಮಾಡ್ತೀವಿ. ಮೈಸೂರಿನ ಗತ ವೈಭವವನ್ನು ಪ್ರವಾಸಿಗರು ಅನುಭವಿಸುವಂತೆ ಮಾಡಲು ನಿರ್ಧಾರ ಮಾಡಿದ್ದು, ಉದ್ಘಾಟಕರಾಗಿ ಯಾರನ್ನ ಕರೆಯಬೇಕು ಎಂಬುದರ ಬಗ್ಗೆ ಎರಡು ಮೂರು ಹೆಸರು ಪ್ರಸ್ತಾಪ ಇದೆ.
ಮುಖ್ಯಮಂತ್ರಿಗಳಿಗೆ ಅಧಿಕಾರ ಕೊಟ್ಟಿದ್ದೇವೆ ಆದ್ದರಿಂದ ಅವರೇ ಉದ್ಘಾಟಕರ ಹೆಸರು ತಿಳಿಸುತ್ತಾರೆ. ದೇಶದ ಒಬ್ಬ ಪ್ರಮುಖ ವ್ಯಕ್ತಿ ದಸರಾ ಮುಖ್ಯ ಅತಿಥಿಯಾಗಿ ಬರುತ್ತಾರೆ ಎಂದು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.