ಸಾಲಗಾರರಷ್ಟೇ ಜಾಮೀನುದಾರರೂ ಜವಾಬ್ದಾರರು: ಮಹೇಶ ಕೋಟಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರಿ ಸಂಘದಲ್ಲಿ ಸಾಲ ಪಡೆದ ಸಾಲಗಾರರಷ್ಟೇ ಜಾಮೀನುದಾರರೂ ಜವಾಬ್ದಾರರು. ಸದಸ್ಯರು ಸಹಕಾರಿಯ ಫೋಟ್ ನಿಯಮಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಸಹಕಾರಿ ಬೈಲಾ ಪ್ರಕಾರ ಸದಸ್ಯತ್ವದಿಂದ ಅನರ್ಹರಾಗುವದು ಎಂದು ಗದುಗಿನ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಮಹೇಶ ಕೋಟಿ ಹೇಳಿದರು.

Advertisement

ಅವರು ನಗರದ ಕಲ್ಯಾಣ ಬಸವೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಜರುಗಿದ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗದಗ ತಾಲೂಕ ವೀರಶೈವ ಮಹಾಸಭಾದ ನಿರ್ದೇಶಕರಾದ ಸಾವಿತ್ರಿ ಹೂಗಾರ ಗದಗ ತಾಲೂಕಾ ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ನಿಮಿತ್ತ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ನಿರ್ದೇಶಕರಾದ ಬಸವರಾಜ ರಾಮನಕೊಪ್ಪ, ಬಸವರಾಜ ಕೊರ್ಲಹಳ್ಳಿ, ಗಂಗಾಧರ ಮೇಲಗಿರಿ, ಶಂಭು ಕಾರಕಟ್ಟಿ, ಸುಶೀಲಾ ಕೋಟಿ, ಸುರೇಖಾ ಪಿಳ್ಳಿ, ಸಲಹಾ ಸಮಿತಿಯ ಸದಸ್ಯ, ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ, ಸಲಹಾ ಸಮಿತಿಯ ಸದಸ್ಯರಾದ ಶ್ರೀನಿವಾಸ ಬಣ್ಣದ, ಕಲ್ಯಾಣಪ್ಪ ಕೋಟಿ, ಶರಣಬಸವ ಮಠದ ಉಪಸ್ಥಿತರಿದ್ದರು.

ಸಹಕಾರಿ ಉಪಾಧ್ಯಕ್ಷರಾಗಿದ್ದ ಪ್ರೇಮನಾಥ ಬಣ್ಣದ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸುಶೀಲಾ ಕೋಟಿ ಸ್ವಾಗತಿಸಿದರು. ಶಂಭು ಕಾರಕಟ್ಟಿ ನಿರೂಪಿಸಿದರು. ಸುರೇಖಾ ಪಿಳ್ಳಿ ವಂದಿಸಿದರು.

ನಗರಸಭಾ ಸದಸ್ಯರಾದ ಚಂದ್ರು ತಡಸದ, ಮುತ್ತು ಮುಶಿಗೇರಿ, ನಗರಸಭೆಯ ಮಾಜಿ ಸದಸ್ಯ ಶರಣಪ್ಪ ಗದ್ದಿಕೇರಿ, ಪ್ರಕಾಶ ಬೇಲಿ, ಶ್ರೀನಿವಾಸ ಹುಬ್ಬಳ್ಳಿ, ನಾಗರಾಜ ಉಮಚಗಿ, ಶಿವಪುತ್ರಪ್ಪ ಕುಂದಗೋಳ, ಶಿವಾನಂದ ಹುಬ್ಬಳ್ಳಿ, ಪಿ.ಸಿ. ಹಿರೇಮಠ, ಛಗನ್ ರಾಜಪುರೋಹಿತ, ಕುಮಾರ ಶೆಲ್ಲಿಕೇರಿ, ಎಸ್.ಎ. ಜಮಾದಾರ, ಈರಣ್ಣ ಮಾನೇದ, ಅಕ್ಷಯ ಬೆಂತೂರು, ಸಂಧ್ಯಾ ಕೋಟ್ತಿ, ಡಾವಣಗೇರಿ ವಕೀಲರು ಸಿದ್ಧಲಿಂಗೇಶ ಹಿರೇಮಠ, ಸತೀಶ ಪೂಜಾರಿ, ರಮೇಶ ಪಿಳ್ಳಿ, ಅಕ್ಷಯ ವಾಯಚಳ ಮುಂತಾದವರು ಪಾಲ್ಗೊಂಡಿದ್ದರು.

ಬಾಕ್ಸ್

ಸಾಲಗಾರರು ತಾವು ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಬೇಕು. ಜಾಮೀನುದಾರರು ಈ ಬಗ್ಗೆ ನಿಗಾ ವಹಿಸಬೇಕು. ಹಿರಿಯರು ಪರಿಶ್ರಮದಿಂದ ಸ್ಥಾಪಿಸಿದ ಈ ಸಹಕಾರಿ ಸಂಸ್ಥೆಯನ್ನು ಪ್ರಗತಿಯೊಂದಿಗೆ ಮುನ್ನಡೆಸಲು ಸರ್ವ ನಿರ್ದೇಶಕರು, ಶೇರುದಾರರು ಸಹಕಾರ ನೀಡಬೇಕು ಎಂದು ಮಹೇಶ ಕೋಟಿ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here