ಬಳ್ಳಾರಿ:ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ಬಳ್ಳಾರಿಯ ಜೀನ್ಸ್ ಉದ್ಯಮ ಮೇಲೆ ಭಾರೀ ಪರಿಣಾಮ ಬೀರಿದೆ. ಉದ್ಯಮಕ್ಕೆ ಬೇಕಾಗುತ್ತಿದ್ದ ಕೆಮಿಕಲ್ಸ್ ಸರಬರಾಜು ಸ್ಥಗಿತವಾಗಿದ್ದು, ಉತ್ಪಾದನೆ ಕುಸಿತವಾಗಿದೆ.
ಪ್ರಮುಖವಾಗಿ, ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಳ್ಳಾರಿಯ ಜೀನ್ಸ್ ಪ್ರಾಡಕ್ಟ್‌ಗಳು ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದು, ಹಬ್ಬದ ಸೀಸನ್‌ನಲ್ಲಿ 20 ಲಕ್ಷ ಜೀನ್ಸ್ ಪ್ಯಾಂಟ್‌ಗಳು ರಫ್ತಿಗೆ ತಡೆ ಬಿದ್ದು ಸಂಕಷ್ಟ ಉಂಟಾಗಿದೆ. ಜೀನ್ಸ್ ಲೇಪನಕ್ಕೆ ಬೇಕಾಗುವ ಕಲರ್ ಕೆಮಿಕಲ್ಸ್ ಕೊರತೆಯಾಗಿ ಶೇ.50ರಷ್ಟು ಉತ್ಪಾದನೆ ಕುಸಿತವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್ಸ್, ಪೊಟ್ಯಾಸಿಯಮ್ ಪರ್ಮಾಂಗನೇಟ್ ಮೊದಲ ಕೆಮಿಕಲ್ಸ್ ಸರಬರಾಜು ಸ್ಥಗಿತವಾಗಿರುವುದು ಉದ್ಯಮಕ್ಕೆ ಮತ್ತೊಂದು ಹೊಡೆತ ತಂದುಕೊಂಡಿದೆ.
ಈ ಕೊರತೆಯಿಂದ ಹಬ್ಬದ ಸೀಸನ್‌ನಲ್ಲಿ ಉದ್ಯಮ ನಲುಗುತ್ತಿದೆ ಮತ್ತು ಬೆಲೆ ಏರಿಕೆ, ರಫ್ತು ಕುಸಿತ, ಉದ್ಯೋಗ ಸಮಸ್ಯೆಗಳಿಗೆ ದಾರಿ ತೆರೆಯುತ್ತಿದೆ.



