ಧಾರವಾಡ:– ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ.
Advertisement
ವಿಜಯ ಮತ್ತು ಮುಜಮ್ಮಿಲ್ ಎಂಬ ಇಬ್ಬರು ಕಳ್ಳರ ಕಾಲಿಗೆ ಪಿ ಎಸ್ ಐ ಮಲ್ಲಿಕಾರ್ಜುನ್ ಹೊಸೂರ ಇವರಿಂದ ಪೈರಿಂಗ್ ನಡೆದಿದೆ. ಕಳ್ಳರನ್ನ ಬೆನ್ನಟ್ಟಿದ್ದಾಗ ಪೋಲಿಸರ ಜೊತೆ ಆರೋಪಿಗಳು ವಾಗ್ವಾದ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೇ ಓರ್ವ ಪೇದೆ, ಪಿ ಎಸ್ ಐ ಮೆಲೆ ಕಳ್ಳರು ಹಲ್ಲೆಗೆ ಮುಂದಾಗಿದ್ದರು. ಹೀಗಾಗಿ ಆತ್ಮರಕ್ಷಣೆಗಾಗಿ ಇಬ್ಬರು ಕಳ್ಳರ ಕಾಲಿಗೆ ಗುಂಡು ಹಾರಿಸಲಾಗಿದೆ.
ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿದ್ಯಾಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.