ಕಲಬುರ್ಗಿಯಲ್ಲಿ ಗುಂಡಿನ ಸದ್ದು: ಕೊಲೆ ಆರೋಪಿ ಸಯ್ಯದ್ ಕೌಸರ್ ಕಾಲಿಗೆ ಗುಂಡೇಟು!

0
Spread the love

ಕಲಬುರ್ಗಿ:- ಇತ್ತೀಚೆಗೆ ರೌಡಿಶೀಟರ್ ಓರ್ವನನ್ನು ಕೊಂದು ಎಸ್ಕೇಪ್ ಆಗಿದ್ದ ಆರೋಪಿ ಸಯ್ಯದ್ ಕೌಸರ್ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ಕಲಬುರ್ಗಿಯಲ್ಲಿ ಜರುಗಿದೆ.

Advertisement

ಡಿಸೆಂಬರ್ 11 ರಂದು ಆರೋಪಿ ಸಯ್ಯದ್ ಕೌಸರ್, ರೌಡಿ ಶೀಟರ್ ಖಲೀಲ್ ಎಂಬಾತನನ್ನು ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಅರೆಸ್ಟ್ ಮಾಡಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಯತ್ನ ನಡೆದಿದೆ. ಹೀಗಾಗಿ ಜೀವರಕ್ಷಣೆಗಾಗಿ ಪೊಲೀಸರು ಕೌಸರ್ ಬಲಗಾಲಿಗೆ ಫೈರಿಂಗ್ ಮಾಡಿದ್ದಾರೆ.

ಗುಲ್ಬರ್ಗಾ ವಿವಿ ಠಾಣೆ ಇನ್ಸ್‌ಪೆಕ್ಟರ್ ಸುಶೀಲ್ ರಿಂದ ಕಲಬುರಗಿ ಹೊರವಲಯದ ಅಜಾದ್ ಪುರ ಬಳಿ ಫೈರಿಂಗ್ ನಡೆದಿದೆ.

ಈ ಬಗ್ಗೆ ಪೊಲೀಸ್ ಅಯುಕ್ತ ಡಾ.ಶರಣಪ್ಪ ಮಾತನಾಡಿ, ಖಲೀಲ್ ಮರ್ಡರ್ ಕೇಸ್ ನಲ್ಲಿ ಸಯ್ಯದ್ ಕೌಸರ್ ಮಿರ್ಜಾ ಪ್ರಮುಖ ಆರೋಪಿ ಆಗಿದ್ದ. ಅಷ್ಟೇ ಅಲ್ಲ ಘಟನೆ ಬಳಿಕ ತಪ್ಪಿಸಿಕೊಂಡು ಹೊರ ರಾಜ್ಯದಲ್ಲಿ ಓಡಾಡಿಕೊಂಡಿದ್ದ. ನಿನ್ನೆ ನಮ್ಮ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಕರೆತಂದಿದ್ದರು.

ಆದರೆ ಠಾಣೆಯಿಂದ ತಪ್ಪಿಸಿಕೊಂಡಿದ್ದ. ಈ ವೇಳೆ ನಮ್ಮವರು ಹಿಡಿಯಲು ಹೋದಾಗ ನಮ್ಮ ಮೂರು ಜನ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಹೀಗಾಗಿ ಪ್ರಾಣ ರಕ್ಷಣೆಗಾಗಿ ನಮ್ಮ ಇನ್ಸ್‌ಪೆಕ್ಟರ್ ಫೈರಿಂಗ್ ಮಾಡಿದ್ದಾರೆ.

ಸಯ್ಯದ್ ಕೌಸರ್ ಮೇಲೆ ಹತ್ತು ಕೇಸ್ ಗಳು ಇವೆ. ಬಡವರ ಜಾಗಕ್ಕೆ ಕನ್ನ ಹಾಕೋದೆ ಇವರ ಕೆಲಸ ಆಗಿತ್ತು.
ಹೆದರಿಸಿ ಬೆದರಿಸಿ ಜಾಗ ಕಬ್ಜಾ ಮಾಡುತ್ತಿದ್ದರು‌. ಅದೇ ವಿಚಾರಕ್ಕಾಗಿ ಡಿ.11 ರಂದು ರೌಡಿ ಶೀಟರ್ ಕೊಲೆಯಾಗಿತ್ತು ಎಂದು ಕಲಬುರಗಿಯಲ್ಲಿ ಪೊಲೀಸ್ ಅಯುಕ್ತ ಡಾ.ಶರಣಪ್ಪ ಹೇಳಿಕೆ ಕೊಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here