ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹಳೇ ಸರಾಫ ಬಜಾರ ಕರೂಗಲ್ ಓಣೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಸಾಯಿ ಸೇವಾ ಸಮಿತಿ ವತಿಯಿಂದ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮುಂಜಾನೆ ಕಾಕಡರತಿ, ಶೇಜಾರತಿ, ಪಂಚಾರತಿ, ಮಂಗಲಸ್ನಾನ, ಮಧ್ಯಾಹ್ನ ಪ್ರಸಾದ ಸೇವೆ ಜರುಗಿತು. ಈ ಸಂದರ್ಭದಲ್ಲಿ 24ನೇ ವಾರ್ಡ್ ನ ನಗರಸಭಾ ಸದಸ್ಯ ನಾಗರಾಜ ತಳವಾರ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಗುರಿಯ ಜೊತೆಯಲ್ಲಿ ಉತ್ತಮ ಗುರುವಿನ ಪಾತ್ರ ಬಹಳ ಮುಖ್ಯ. ಅಜ್ಞಾನದಿಂದ ಸುಜ್ಞಾನದ ಕಡೆಗೆ, ಅಂಧಕಾರದಿಂದ ಬೆಳಕಿನ ಕಡೆಗೆ ನಡೆಸುವವರೇ ಗುರು. ಗುರುವಿನ ಕರುಣೆ, ಪ್ರೀತಿ ವಾತ್ಸಲ್ಯಗಳು ಸದಾ ಎಲ್ಲರ ಮೇಲಿರಲಿ ಎಂದರು.
ಸಾಯಿಸೇವಾ ಸಮಿತಿ ಅಧ್ಯಕ್ಷ ಸಂತೋಷ ಮಹೇಶಚಂದ್ರ ಕಬಾಡರ ಮಾತನಾಡಿ, ವ್ಯಕ್ತಿಯೋರ್ವನ ಜೀವನವನ್ನು ಸಾರ್ಥಕವಾಗಿಸುವವರೇ ಶ್ರೀ ಶಿರಡಿ ಸಾಯಿಬಾಬಾ ಗುರುಗಳು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಸಹ ಕಾರ್ಯದರ್ಶಿ ಸುನೀಲ ಮುಳ್ಳಾಳ, ಕಾರ್ಯದರ್ಶಿ ಮಂಜುನಾಥ ಮಜ್ಜಿಗುಡ್ಡ, ಖಜಾಂಚಿ ಮಹೇಶ ಕೋರಿ, ಸದ್ಯರಾದ ಬಾಬು ಸುಲಾಖೆ, ಮಂಜುನಾಥ ಮುರಿಗೆಪ್ಪ ಕರುಗಲ್, ಕೇದಾರ ಅಬ್ಬಿಗೇರಿ, ಸುಮಂತ ನೀಡೋಣೆ, ಸುರೇಶ ಹನುಮಸಾಗರ, ಹಿರಿಯರಾದ ದೇಸಾಯಿಗೌಡ್ರ, ಈರಣ್ಣ ಬಾಳಿಕಾಯಿ ಸೇರಿದಂತೆ ಸಾಯಿ ಬಾಬಾ ಸದ್ಭಕ್ತರು ಪಾಲ್ಗೊಂಡಿದ್ದರು.