ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಯೊಬ್ಬ ಜೀವಿಯ ಅವಿಭಾಜ್ಯ ಅಂಗವಾದ ಗುರುವಿಗೆ ಕೃತಜ್ಞತೆಯನ್ನು ತೋರಿಸಲೆಂದು ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿಯ ವತಿಯಿಂದ ಗುರುಪೂರ್ಣಿಮೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Advertisement
ಈ ಸಂದರ್ಭದಲ್ಲಿ ಪಂಚಾಕ್ಷರಿ ಗವಾಯಿಗಳವರ ವಸತಿಯುತ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಬಿ. ಹಿರೇಮಠರನ್ನು ಸನ್ಮಾನಿಸಲಾಯಿತು. ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷರಾದ ಅಶ್ವಿನಿ ಜಗತಾಪ ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಮಹತ್ವವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಯಶ್ರೀ ಉಗಲಾಟ, ಪುಷ್ಪಾ ಭಂಡಾರಿ, ಪೂಜಾ ಭೂಮಾ, ಮೀನಾಕ್ಷಿ ಕೊರವಣ್ಣವರ, ಶಿಲ್ಪಾ ಅಕ್ಕಿ, ತನುಜಾ ಗೋವಿಂದಪ್ಪನವರ, ಸುಮಾ ಪಾಟೀಲ, ಸಾಗರಿಕಾ ಅಕ್ಕಿ ಹಾಗೂ ಪವಿತ್ರಾ ಬಿರಾದರ ಉಪಸ್ಥಿತರಿದ್ದರು.