ಅದ್ವೈತಾನುಭವದಲ್ಲಿ `ಗುರುಪೂರ್ಣಿಮೆ’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗುರುವಿನ ಸಾನ್ನಿಧ್ಯ ಹಾಗೂ ಕೃಪೆಯಾಗಬೇಕೆಂದರೆ ಪ್ರತಿಯೊಬ್ಬನೂ ತನ್ನ ಗುರುವಿನ ದರ್ಶನಕ್ಕಾಗಿ ಜೀವನ ಪೂರ್ತಿ ಅಲೆದು ಅರಸಿದಾಗ ಗುರುವಿನ ಕರುಣೆಯಿಂದ ದರ್ಶನ ಭಾಗ್ಯ ದೊರೆತು ಗುರು ಸೇವೆಯಿಂದ ಮುಕ್ತಿ ದೊರೆಯುತ್ತದೆ ಎಂದು ವೇ.ಮೂ. ರತ್ನಾಕರಭಟ್ಟ ಗುರುಗಳು ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಶ್ರೀ ಶಂಕರಮಠದಲ್ಲಿ ಜರುಗಿದ ಅದ್ವೈತಾನುಭವ-39ರ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಹುಲಕೋಟಿಯ ಶ್ರೀ ಶಂಕರರ ಅನುಯಾಯಿಗಳಾದ ಶೈಲಜಾ ಅರುಣ ಪಾಟೀಲ ಭಕ್ತಿಸೇವೆಯನ್ನು ವಹಿಸಿಕೊಂಡು ಅದ್ವೈತಪ್ರಸಾರ ಪರಿಷತ್ತು ಪ್ರತಿ ಮಾಸದಲ್ಲಿ ಬರುವ ಸನಾತನ ಹಾಗೂ ವೈದಿಕ ವಿಷೇಶಗಳನ್ನು ಜನರಿಗೆ ತಿಳಿಸಿ ಕೊಡಲು ಅನುಭವಿಗಳು ಹಾಗೂ ವಿದ್ವಾಂಸರನ್ನು ಕರೆದು ಕಾರ್ಯಕ್ರಮ ನಡೆಸುತ್ತಿರುವುದನ್ನು ಸ್ವಾಗತಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ರಾಮಚಂದ್ರ ಮೋನೆ ನಮಾತನಾಡಿ, ಗುರುಪೂರ್ಣಿಮೆಯಂದು ಎಲ್ಲ ಪಾಲಕ-ಪೊಷಕರು ತಮ್ಮ ಮಕ್ಕಳಿಗೆ, ಮನೆಯಲ್ಲಿರುವ ಕಿರಿಯರಿಗೆ ಸನಾತನ ಧರ್ಮದಲ್ಲಿ ಆಸಕ್ತಿ ಹಾಗೂ ನಮ್ಮ ಸಂಪ್ರದಾಯಗಳನ್ನು ಅರುಹಬೇಕು ಮತ್ತು ಅವುಗಳ ಆಚರಣೆ, ಅನುಪಾಲನೆ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ನುಡಿದರು.

ವಿಜೇತಾ ಕೌಜಲಗಿಯವರಿಂದ ಪ್ರಾರ್ಥನೆ, ಶ್ರಾವಣೀ ಕುಲಕರ್ಣಿಯವರಿಂದ ಶಂಕರ ಮಾಲಿಕೆಯ ಪಠಣ, ಪ್ರೊ. ಅನಿಲ ವೈದ್ಯರಿಂದ ಆದ್ವೈತ ಮಂಥನ ಕಾರ್ಯಕ್ರಮ ನಡೆಯಿತು. ಸನಾತನ ಧರ್ಮದಲ್ಲಿ ವಿಜ್ಞಾನ ಕುರಿತು ಸುಕೃತಿ ಪಾಟೀಲ ವಿವರಣೆ ನೀಡಿದರು. ಸ್ವಾಗತ ಹಾಗೂ ಪರಿಚಯವನ್ನು ರವಿ ಪೂಜಾರ ಮಾಡಿದರೆ, ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಗಣಪತಿ ಕೌಜಲಗಿ ವಂದಿಸಿದರು.

ಕಾರ್ಯಕ್ರಮದಲ್ಲಿ ವೇ.ಮೂ ದತ್ತಂಭಟ್ಟ ತೆಂಬದಮನಿ, ವೇ.ಮೂ ಗಣೇಶಭಟ್ಟ ಪುರಾಣಿಕ, ರವೀಂದ್ರ ಜೋಶಿ, ರಾಜೇಂದ್ರ ಕುಲಕರ್ಣಿ, ಗುರುಮೂರ್ತಿ ದೇಶಪಾಂಡೆ, ಪಿ.ವಿ. ಇನಾಮದಾರ, ಹೇಮಂತ ಕುಲಕರ್ಣಿ, ಕೃಷ್ಣ ಸೊರಟೂರ, ಎಚ್.ಡಿ. ಪಾಟೀಲ, ನಾಗೇಶ ಗುಡಿ, ಅಕ್ಷಯ ಗುಡಿ, ಸ್ನೇಹಾ ಗೋಡಕಿಂಡಿ, ಸುಧಾ ಮೋನೆ, ಅಶ್ವಿನಿ ಪುರಾಣಿಕ, ಪಲ್ಲವಿ ಕುಲಕರ್ಣಿ, ಜ್ಯೋತಿ ಇನಾಮದಾರ, ಶಲಾಕಾ ಹುದ್ದಾರ, ಛಾಯಾ ಕುಲಕರ್ಣಿ ಮುಂತಾದವರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here