ವಿಜಯಸಾಕ್ಷಿ ಸುದ್ದಿ, ಹಾವೇರಿ : ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜೀವನ ಸಾಧನೆ, ಸಂದೇಶವನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಅಸ್ತಿತ್ವಕ್ಕೆ ತರಲಾದ ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಹಾವೇರಿ ತಾಲೂಕಾ ಘಟಕದ ಉದ್ಘಾಟನೆ ಮತ್ತು ಸೇವಾ ಸಮಿತಿಯ ಪದಾಧಿಕಾರಿಗಳಿಗೆ ಗುರು ಸೇವಾ ದೀಕ್ಷೆ ಸಮಾರಂಭವು ಮೇ 25ರ ಬೆಳಿಗ್ಗೆ 10.30ಕ್ಕೆ ನಗರದ ಶ್ರೀ ಹುಕ್ಕೇರಿಮಠದ ಅಕ್ಕನ ಬಳಗದ ಅಕ್ಕನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕರಾದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಗದಗಇವರು ನಡೆಸಿಕೊಡುವರು. ಸೇವಾ ಸಮಿತಿಯ ತಾಲೂಕಾ ಅಧ್ಯಕ್ಷೆ ಚಂಪಾ ಮಲ್ಲಿಕಾರ್ಜುನ ಹುಣಸಿಕಟ್ಟಿ ಹಾವೇರಿ ಇವರು ಅಧ್ಯಕ್ಷತೆ ವಹಿಸಿಕೊಳ್ಳುವರು. ಸಂಸ್ಕೃತ ಶಿಕ್ಷರು, ಪುರಾಣ ಪ್ರವಚನಕಾರರಾದ ಶ್ರೀ ಪ್ರಭುಲಿಂಗಯ್ಯ ಆರಾಧ್ಯಮಠ ಹತ್ತಿಮತ್ತೂರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾವೇರಿ ಜಿಲ್ಲಾಧ್ಯಕ್ಷೆ ಡಾ. ಗೀತಾ ಸುತ್ತಕೋಟೆ, ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದ್ರ‍್ರಾಕ್ಷಾಯಿಣಿ ವಾಲ್ಮಿಕಿ ಇವರುಗಳು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸೇವಾ ಸಮಿತಿಯ ಸಂಸ್ಥಾಪಕರು, ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಗುರುಸೇವಾ ದೀಕ್ಷೆ ನೀಡಿ ಸತ್ಕರಿಸಲಿದ್ದಾರೆ. ಅಂಧ ಕಲಾವಿದರುಗಳಾದ ಮಂಜುನಾಥ ಕಮ್ಮಾರ, ಸುರೇಶ ಅಂಗಡಿ ಇವರನ್ನು ಸತ್ಕರಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ಅಕ್ಕಂದಿರಿಂದ ಮತ್ತು ಸೇವಾ ಸಮಿತಿಯ ಸಹಕಾರ್ಯದರ್ಶಿ ಮಮತಾ ಮಾಗಳ ಇವರಿಂದ ವಚನ ಸಂಗೀತ ಕಾರ್ಯಕ್ರಮವಿದೆ. ಭಾರತಿ ಎಸ್.ಯಾವಗಲ್ಲ ಪ್ರಾರ್ಥನೆ ನಡೆಸಿಕೊಡುವರು. ಸಮಿತಿಯ ಕೋಶಾಧ್ಯಕ್ಷ ಫಕ್ಕೀರಶಟ್ರು ಎಸ್.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡುವರು. ಸುರೇಖಾ ಬ.ನೆರಳೆಕರ್ ಸ್ವಾಗತ ಭಾಷಣ ಮಾಡುವರು.
ವಂದನಾರ್ಪಣೆಯನ್ನು ರಶ್ಮಿ ಎನ್.ತುಪ್ಪದ ನಡೆಸಿಕೊಡುವರು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪಿ.ಅಕ್ಕಿ ಕಾರ್ಯಕ್ರಮ ನಿರೂಪಣೆ ಮಾಡುವರು ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಹಾವೇರಿ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪಿ.ಅಕ್ಕಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.