27 ವರ್ಷಗಳ ಬಳಿಕ ಒಂದಾದ ಗುರುಗಳು-ವಿದ್ಯಾರ್ಥಿಗಳು: ಸಂಭ್ರಮದಿಂದ ನಡೆದ ಗುರುವಂದನಾ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಮಾಧ್ಯಮಿಕ ಶಾಲೆಯ ೧೯೯೬-೯೭ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಜರುಗಿತು.

Advertisement

ಮುಖ್ಯ ಅತಿಥಿಗಳಾಗಿ ಗುರುಗಳಾದ ವಿ.ವಿ. ಮರಡ್ಡಿಯವರು ಪಾಲ್ಗೊಂಡು ಮಾತನಾಡಿ, ತಾವು ಎಲ್ಲರೂ 27 ವರ್ಷದ ನಂತರ ಕೂಡಿ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಚಾರ. ತಮ್ಮಲ್ಲೆರ ಬಾಳು ಬೆಳಗಲಿ ಎಂದು ಹಾರೈಸಿದರು.

ಗುರುಗಳಾದ ಜಿ.ಪಿ. ದೇಶಪಾಂಡೆ ಮಾತನಾಡಿ, ನೀವು ಮಾಡುತ್ತಿರುವ ಗುರುವಂದನಾ ಕಾರ್ಯಕ್ರಮಕ್ಕೆ ಸಾರ್ಥಕತೆ ಬರಬೇಕಾದರೆ ಸಂಸ್ಥೆಯ ಸಂಸ್ಥಾಪಕರನ್ನು ಹಾಗೂ ಗುರುಗಳನ್ನು ಸ್ಮರಿಸುವುದು ಸೂಕ್ತ. ನೀವು ನನಗೆ ಮಾಡಿದ ಸನ್ಮಾನವನ್ನು ನನಗೆ ಕಲಿಸಿದ ಗುರುವಿಗೆ ಅರ್ಪಿಸುತ್ತೇನೆೆ ಎಂದರು.

ಪಾಪಳೆ ಗುರುಗಳು ಮಾತನಾಡಿ, 27 ವರ್ಷಗಳ ನಂತರ ನಮ್ಮನ್ನೆಲ್ಲಾ ನೆನಪು ಮಾಡಿಕೊಂಡು ಗುರು ನಮನ ಸಲ್ಲಿಸುತ್ತಿರುವುದು ಗುರು-ಶಿಷ್ಯರ ಪರಂಪರೆಯಾಗಿದೆ. ತಾವೆಲ್ಲರೂ ಜವಾಬ್ದಾರಿಯುತ ಸ್ಥಾನದಲ್ಲಿರುವುದು ಸಂತಸದ ವಿಚಾರ ಎಂದರು.

ಗುರುಮಾತೆಯರಾದ ಅಸುಂಡಿ ಹಾಗೂ ಅಳಗುಂಡಿ ಮಾತನಾಡಿದರು. ಈ ಸಂದರ್ಭದಲ್ಲಿ ಗುರುಗಳಾದ ಆರ್.ಎಸ್. ಬಂಡಿ, ರಾಂಪೂರ, ಡಿ ದರ್ಜೆ ನೌಕರರಾದ ರಾಮಣ್ಣ ಚೌಡಕಿ, ದಾಸರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here