ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಾಲೆಯ ಹಳೆಯ ನೆನಪುಗಳು ಪರಿಶ್ರಮ, ಶಿಕ್ಷಣದ ಮಹತ್ವ, ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತವೆ ಎಂದು ಶಿಕ್ಷಣ ಪ್ರೇಮಿ ರವೀಂದ್ರನಾಥ ದೊಡ್ಡಮೇಟಿ ಅಭಿಪ್ರಾಯಪಟ್ಟರು.
ಸಮೀಪದ ಜಕ್ಕಲಿ ಗ್ರಾಮದ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ 1997-98ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂದು ನಮ್ಮ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಪ್ರಾಮಾಣಿಕತೆ, ಸೇವಾ ಮನೋಭಾವ, ಉತ್ತಮ ಚಾರಿತ್ರ‍್ಯ, ನಡಾವಳಿಗಳಿಂದ ನಮ್ಮ ಗ್ರಾಮದ ಮಕ್ಕಳಲ್ಲಿ ಸಾರ್ಥಕತೆಯನ್ನು ತಂದು ಶಿಕ್ಷಣದಲ್ಲಿ ಹೊಸತನವನ್ನು ಮತ್ತು ನೈತಿಕತೆಯ ತಳವನ್ನು ಹಾಕಿದ್ದಾರೆ. ಆದರೆ ಇಂದಿನವರಲ್ಲಿ ಇವೆಲ್ಲವೂ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದರು.
ಸನ್ಮಾನಿತ ನಿವೃತ್ತ ಶಿಕ್ಷಕ ಟಿ.ಟಿ. ದಾಸರ ಮಾತನಾಡಿ, ಈ ಜಗತ್ತಿನಲ್ಲಿ ಒಳ್ಳೆಯದನ್ನು ಸಾಧಿಸುವುದು ಯುವಕರ ಕೈಯಲ್ಲಿ ಇದೆ. ಆದರೆ ಮನಃಪೂರ್ವಕವಾಗಿ ನಂಬಿದರೆ ಸಾಕು, ಅದಕ್ಕೆ ಪೂರಕವಾದ ಎಲ್ಲಾ ಶಕ್ತಿಗಳು ತಾವಾಗಿಯೇ ಒದಗುತ್ತವೆ ಎಂದರು.
ಈ ಸಂದರ್ಭದಲ್ಲಿ ಸೇವೆ ಸಲ್ಲಿಸಿ ನಿಧನರಾದ ಅನೇಕ ಶಿಕ್ಷಕರನ್ನು ಸ್ಮರಿಸಿ ಅವರ ಧರ್ಮಪತ್ನಿಯರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಬಿ.ಆರ್. ಗದುಗಿನ ವಹಿಸಿದ್ದರು. ಗುರುಲಿಂಗಮೂರ್ತಿ ಮಂಟಯ್ಯನಮಠ ಉಪಸ್ಥಿತರಿದ್ದರು.
1997-98ನೇ ಸಾಲಿನ ವಿದ್ಯಾರ್ಥಿಗಳಾದ ಎಸ್.ಎಚ್. ತಳವಾರ, ಹನಮಂತ ತಳವಾರ, ರಿಯಾಜ್ ಮುಲ್ಲಾ, ಅಲ್ಲಾಸಾಬ ನದಾಫ್, ಪ್ರಭು ರೇಣುಕಮಠ, ರಾಜೇಶ್ವರಿ ದೊಡ್ಡಮೇಟಿ, ರಾಜೇಶ್ವರಿ ಇಟ್ಲಾಪೂರ, ಶರಣಪ್ಪ ಮಂಗಳಗುಡ್ಡ, ಸುರೇಶ ಹಡಪದ, ದಾಕ್ಷಾಯಿಣಿ ಗಾಣಿಗೇರ, ಜ್ಯೋತಿ ಸಂಕನೂರ, ಶರಣಪ್ಪ ಬೂದಿಹಾಳ, ಕವಿತಾ ಲಿಗಾಡಿ, ಕಸ್ತೂರಿ ಇಟಗಿ, ರಾಮಪ್ಪ ತಳವಾರ, ಸಾವಿತ್ರಿ ಪಾಟೀಲ, ವಿಜಯಲಕ್ಷ್ಮೀ ಹಿರೇಮಠ, ಬಸವಣ್ಣೆವ್ವ ಭಜಂತ್ರಿ, ವೀರಪ್ಪ ಮಾದರ, ಮಾರುತಿ ಬೇವಿನಮರದ, ರೇಣುಕಾ ಜಂಗಣ್ಣವರ, ದೇವೀಂದ್ರಪ್ಪ ಮಾದರ, ವನಿತಾ ಜೋಷಿ, ಮಾರುತಿ ತಳ್ಳಿಹಾಳ, ಶಿವಲೀಲಾ ಮುಗಳಿ, ಲೀಲಾ ರಡ್ಡಿ ಸೇರಿದಂತೆ ಇನ್ನಿತರರು ಇದ್ದರು.
ನಿವೃತ್ತ ಶಿಕ್ಷಕರಾದ ಎಸ್.ಬಿ. ಗುಳಗಣ್ಣವರ, ಎಂ.ವೈ. ಹಳೆಮನೆ, ಎಸ್.ವಾಯ್. ಬೂದಿಹಾಳ, ಆರ್.ಬಿ. ತಳವಾರ, ಡಿ.ಬಿ. ತಳವಾರ, ಎಸ್.ಟಿ. ಕಳಸಾಪೂರ, ಎಸ್.ಆರ್. ಬಾಗಲಿ, ಎಸ್.ಬಿ. ಬಳಿಗೇರ, ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಎನ್.ಬಿ. ಹಿರೇಮನಿ, ಅಯ್ಯಪ್ಪ ತಿಲಗರ, ಎಚ್.ವೈ. ಮಣ್ಣೊಡ್ಡರ ಇವರನ್ನು ಸನ್ಮಾನಿಸಲಾಯಿತು.