ವಿಜಯಸಾಕ್ಷಿ ಸುದ್ದಿ, ಗದಗ: ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಗುರುಬಸವ ಸಿ.ಬಿ.ಎಸ್.ಇ ಶಾಲೆಯ 10ನೇ ತರಗತಿ ಫಲಿತಾಂಶ ಶೇ.100ರಷ್ಟಾಗಿದೆ.
Advertisement
ಪರೀಕ್ಷೆ ಬರೆದ 90 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಸಾನಿಕಾ ಸುನೀಲ ದಿವಾಕರ (ಶೇ. 91.5) ಪ್ರಥಮ, ಆದಿತ್ಯ ಪ್ರವೀಣಕುಮಾರ ಬೇವಿನಮರದ (ಶೇ 90.17) ದ್ವಿತೀಯ, ವಿನಯ ಕೊಟ್ರಪ್ಪ ಉಪ್ಪಿನ (ಶೇ. 88.67) ತೃತೀಯ ಸ್ಥಾನ ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಆಡಳಿತಾಧಿಕಾರಿ ಪ್ರಾ. ಶಿವಾನಂದ ಪಟ್ಟಣಶೆಟ್ಟಿ, ಉದ್ದಿಮೆದಾರ ಈಶ್ವರಪ್ಪ ಬೇವಿನಮರದ ಅಭಿನಂದಿಸಿದ್ದಾರೆ.