ವಿಜಯಸಾಕ್ಷಿ ಸುದ್ದಿ, ಗದಗ: ಅರುಣೋದಯ ವಾಯುವಿಹಾರಿಗಳ ವಿವಿಧೋದ್ದೇಶಗಳ ಸಂಘದ ಗೌರವಾಧ್ಯಕ್ಷ ಪ್ರೊ. ಆರ್.ಎಸ್. ಕುಂದಗೋಳರಿಗೆ ಅವರ ಶಿಷ್ಯಬಳಗದಿಂದ ಗುರುವಂದನೆ ಕಾರ್ಯಕ್ರಮ ಜರುಗಿತು.
ನಗರದ ಮುನ್ಸಿಪಲ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುವೃಂದಕ್ಕೆ ಗೌರವ ಸಲ್ಲಿಸಲು ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಣೋದಯ ವಾಯುವಿಹಾರ ಬಳಗದ ಅಧ್ಯಕ್ಷ ಪ್ರೊ. ಬಿ.ಆರ್. ಜಾಲಿಹಾಳ ವಹಿಸಿ ಮಾತನಾಡಿ, ಕುಂದಗೋಳ ಗುರುಗಳು ನಿವೃತ್ತಿ ಹೊಂದಿ ಹತ್ತು ವರ್ಷಗಳಾದರೂ ಅವರ ಶಿಷ್ಯರು ಅವರನ್ನು ನೆನೆದು ಅವರ ಮನೆಯವರೆಗೆ ಬಂದು ಗೌರವಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದರು.
ಸನ್ಮಾನ ಸ್ವೀಕರಿಸಿ ಪ್ರೊ. ಆರ್.ಎಸ್. ಕುಂದಗೋಳ ಮಾತನಾಡಿ, ಶಿಷ್ಯರು ಪ್ರೀತಿಯಿಂದ ನಮ್ಮ ಮನೆಗೆ ಬಂದು ಗೌರವ ಸಲ್ಲಿಸಿರುವುದು ಅವಿಸ್ಮರಣೀಯ. ನಾನು ಒಬ್ಬ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು ಸಾರ್ಥಕವಾಯಿತು ಎಂದರು.
ಕಾರ್ಯಕ್ರಮದಲ್ಲಿ ವೆಂಕಟೇಶ ಕಾರಬಾರಿ, ಅನಂತ ಗೌಡಪ್ಪನವರ, ಜಿ.ವಿ. ಕಿಲಬನವರ, ಶಂಕರ ಬಳ್ಳಾರಿ, ಸೋಮಶೇಖರ ಬಿರಾದಾರ, ನಾಗರಾಜ ತಟ್ಟಿ, ಮಲ್ಲು ತಟ್ಟಿ, ಅಲ್ತಾಫ್ ಹುಬ್ಬಳ್ಳಿ, ಅರುಣೋದಯ ವಾಯುವಿಹಾರ ಸಂಘದ ಬಿ.ಬಿ. ಮಾಲಗಿತ್ತಿ, ಎಂ.ಸಿ. ವಗ್ಗಿ, ಎಸ್.ಬಿ. ಸಜ್ಜನರ, ಜಿ.ಬಿ. ಚನ್ನಪ್ಪಗೌಡರ, ಅನಂತಮೋಹನ ಭಟ್ಟ, ಟಿ.ಎನ್. ಗೋಡಿ, ಜಿ.ಬಿ. ಡೊಣ್ಣಿ, ಅಶೋಕ ವಡವಡಗಿ, ಅಶೋಕ ಕೊಡಗಲಿ, ಎಂ.ಬಿ. ಕರಿಬಿಷ್ಠಿ, ಎಮ್.ಎಫ್. ಕಲಕಂಬಿ, ಆರ್.ಟಿ. ನಾರಾಯಣಪೂರ, ಜಗದೀಶ ಜಾಲಿ, ಜಯಣ್ಣ ಪಾಟೀಲ, ಮಂಜು ಶಿವನಗುತ್ತಿ, ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ವಾಸು ಲಮಾಣಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಹೆಚ್.ಎನ್. ಚಿಗರಿ ಸ್ವಾಗತಿಸಿದರು, ಆರ್.ಎಮ್. ಜಾಗನೂರ ವಂದಿಸಿದರು.