ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿಯಾಗಿತ್ತು ಗುರು-ಶಿಷ್ಯರ ಪುನರ್ಮಿಲನ. ಹುಬ್ಬಳ್ಳಿಯ ವಿಜಯನಗರದ ಸಿಟಿ ಹೈಸ್ಕೂಲಿನ 1992-93ನೇ ಹಳೆಯ ವಿದ್ಯಾರ್ಥಿಗಳು ಇತ್ತೀಚೆಗೆ ಗೋಕುಲ್ ರೋಡಿನ ಶಾಂಭವಿ ಹಾಲ್‌ನಲ್ಲಿ ತಮಗೆ ಜ್ಞಾನಧಾರೆ ಎರೆದ ಗುರುಗಳಿಗೆ ಗೌರವ ಸಮರ್ಪಣೆ ಮಾಡಬೇಕೆಂಬ ಆಕಾಂಕ್ಷೆಯಲ್ಲಿದ್ದರೆ, ತಮ್ಮ ಶಿಷ್ಯರು ಬಹು ಎತ್ತರಕ್ಕೆ ಬೆಳೆದಿರುವುದನ್ನು ನೋಡುವ ಹಂಬಲ ಗುರುಗಳಲ್ಲಿ ತೋರುತ್ತಿತ್ತು. ಈ `ಗುರುವಂದನೆ’ಯೆಂಬ ಸಂಸ್ಕಾರದ ಹಾದಿಯು, ಗುರು-ಶಿಷ್ಯರ ಪುನರ್ಮಿಲನಕ್ಕೆ ಸಾಕ್ಷಿಯಾಗಿತ್ತು.
ಶಿಕ್ಷಕರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸುಮಾರು 70 ವಿದ್ಯಾರ್ಥಿಗಳು ಒಟ್ಟು 20 ಜನ ಶಿಕ್ಷಕರಿಗೆ ಪಾದಪೂಜೆ-ಗೌರವಾರ್ಪಣೆ ಸಲ್ಲಿಸಿ, ನೆನಪಿನ ಕಾಣಿಕೆ ನೀಡಿ, ಕೃತಾರ್ಥರಾದರು. ಶಾಲೆಯ ನಿವೃತ್ತ ಶಿಕ್ಷಕರಾದ ಕೆ.ಎನ್. ಮಿಟ್ಟಿಮನಿ, ಎಸ್.ಸಿ. ತಾಪಸ, ಜಿ.ಜಿ. ಲೋಬೊಗೋಳ, ಜಿ.ಆರ್. ಗುಡಿ, ಎಂ.ವಿ. ಮಾನೆ, ಎಸ್.ಎ. ಹಂಚಾಟೆ, ಎಸ್.ಬಿ. ಮಳಲಿ, ಎಸ್.ಎಸ್. ಪಾಂಡುರಂಗಿ, ಮಂಜುಳಾ ಪಾಟಿಲ್, ಎಸ್.ಪಿ. ಕೆರೂರ, ವಿನುತಾ ಉಡುಪಾ, ಗೀತಾ ಕೊನೇರಿ, ಎಸ್.ಡಿ. ಶಾನಭಾಗ, ಕಮಲಾ ಕುಲಕರ್ಣಿ, ಆರ್.ಎಚ್. ಪಾಟಿಲ್, ಧನಪಾಲ ಎರೆಸೀಮೆ, ವಿ.ಬಿ. ನಾಯಕ, ಕಚೇರಿ ಸಿಬ್ಬಂದಿಯವರಾದ ಫಕ್ಕೀರಪ್ಪ ಭಜಂತ್ರಿ ಹಾಗೂ ತೊರಗಲ್‌ರವರು ಮತ್ತು ಪ್ರಸ್ತುತ ಮುಖ್ಯೋಪಾಧ್ಯಾಯರಾದ ವಿದ್ಯಾ ಜೋಶಿ ಹಾಗೂ ವೈ.ಬಿ. ಕೆಂಪಣ್ಣವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನೆಲ್ಲ ಆಶೀರ್ವದಿಸಿದರು.
ಪ್ರಾರ್ಥನೆಯನ್ನು ಭಾರತಿ ಸರ್ವದೆ ತಂಡ ಹಾಗೂ ಸ್ವಾಗತಗೀತೆ ದೀಪಾಲಿ ಕುಲಕರ್ಣಿ ತಂಡದವರು ಮಾಡಿದರು. ಪ್ರಾಸ್ತಾವಿಕ ನುಡಿ ಹೇಮಾವತಿ ಕಾರಿಕಾಯಿ ಮಾಡಿದರು. ವಿಜಯ ಮಾನೆ ಸ್ವಾಗತಿಸಿದರು, ಸಿಟಿ ಹೈಸ್ಕೂಲ್ ನಡೆದುಬಂದ ದಾರಿಯನ್ನು ಪ್ರಶಾಂತ ಎಮ್.ಎಸ್. ಹೇಳಿದರು. ಡಾ. ಶಿಲ್ಪಾ ಚರಂತಿಮಠ ನಿರೂಪಿಸಿದರು. ಜಗದೀಶ ಗೋಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿನಿಯರಾದ ಗೀತಾ ಪಾಟಿಲ, ಜಾನಕಿ ಸಂಗಳ, ಸುಮಿತ್ರಾ ಧನಿಗೊಂಡ, ಆಶಾ ದೊಡಮನಿ, ಸುಧಾ ಉಪಾಸಿ, ಭಾನುಮತಿ ಅಡಗಲ್, ಅರ್ಶಿಯಾ ಸೈಯದ, ಅಕ್ಕಮ್ಮ, ಲೀಲಾವತಿ, ರತ್ನಾ, ಸ್ಮಿತಾ ಬೆಳ್ಳುಬ್ಬಿ, ಹಾಗೂ ವಿದ್ಯಾರ್ಥಿಗಳಾದ ಸತೀಶ ಪಾಟಿಲ, ಪ್ರಸಾದ ಕುಲಕರ್ಣಿ, ಜಗದೀಶ ಶಿರಳ್ಳಿ, ಅರುಣ ಬೊಮ್ಮನಹಳ್ಳಿ, ಮಹೇಶ ಮುಗಳಿ, ಗಿರೀಶ ಎಂ.ಪ್ರಕಾಶ ಗಾಣಿಗೇರ, ಕುಮಾರ ಹೂಗಾರ, ಹುಲಗೇಶ, ಸಂಜೀವ ಅಗಡಿ, ಮಂಜುನಾಥ ಕಾಳೆ, ಪ್ರಕಾಶ ಗಾಣಗೇರ, ಗಿರೀಶ ಜಂಬಗಿ, ನರೇಂದ್ರ ಗೀತೆ, ಪ್ರಕಾಶ ಕುಂದಗೋಳ, ಶಿವಾನಂದ ಕಡೂರ, ಸ್ಯಾಮುಯೆಲ್ ನಡಕಟ್ಟೀನ್, ಎಂ ಎನ್ ಶಿಂದೆ, ಕುತುಬುದ್ದೀನ ಮುಲ್ಲಾ, ಜಗದೀಶ ಪಾಟಿಲ, ಆನಂದ ಜರತಾರಘರ, ಅನಿಲ ಪೂಜಾರ, ಪ್ರಶಾಂತ ಎಂ ಎಸ್ ಲಕ್ಷ್ಮಿನಾರಾಯಣ ಶಾನಬಾಗ, ನವೀನ ವೈದ್ಯ, ರಾಮಚಂದ್ರ ಕೊಂಡಪಲ್ಲಿ, ಅಸ್ಲಂ ಪಾಶ್ಚಾಪುರ, ಇಮಾಮ ಶೇಖ, ಜಗದೀಶ ಜೋಶಿ, ರಾಜೇಶ ರಾಮಪುರ, ರಾಮು ಬೆಳಗಲಿ, ಯಲ್ಲಪ್ಪ ಹೆಬ್ಬಳ್ಳಿ, ಶ್ರೀನಿವಾಸ ಜಮಖಂಡಿ, ಶ್ರೀಕಾಂತ ಕಟವಾಲ, ವೆಂಕಟೇಶ ಜಿ ಕೆ ಬಸವರಾಜ ಮಡ್ಲಿ, ಪ್ರವೀಣ ಮೊಕಾಶಿ, ಬಾಬರ, ನಾಗರಾಜ ಅಂಗಡಿ, ಮಂಜುನಾಥ ಗೋಡಕೆ, ಈಶ್ವರ ಕುರಟ್ಟಿ, ಗಂಗಾಧರ ಕಲ್ಲೂರ, ಈಶ್ವರ ಅರಳಿಬಟ್ಟಿ, ಗೋನಾಳ, ವೆಂಕಟೇಶ ಕೊಂಡಪಲ್ಲಿ, ಮಂಜುನಾಥ ರೊದ್ದಾ, ಸೋಮಶೇಖರ ಪಟ್ಟನಶೆಟ್ಟಿ, ರಘು, ಮಲ್ಲಿಕಾರ್ಜುನ ದಳವಾಯಿ, ಆನಂದ ಕೋಟಿ, ದ್ಯಾಮಣ್ಣ ಕೆರೂರ, ರವಿ ಪೂಜಾರ, ರವಿಂದ್ರ ಮಜ್ಜಗಿ, ಅಶೋಕ ಕೋಳೆಕರ ಉಪಸ್ಥಿತರಿದ್ದರು.
ತಮ್ಮ ಹಿತ ನುಡಿಗಳ ಮೂಲಕ ಶಿಕ್ಷಣ-ಸಂಸ್ಕಾರದ ಮಹತ್ವ ತಿಳಿಸುತ್ತಾ, ವಿದ್ಯಾರ್ಥಿಗಳಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ, ಕಲಿತ ಶಾಲೆ ಹಾಗೂ ಸಮಾಜಕ್ಕೆ ಕೈಲಾದಷ್ಟು ಕೊಡುಗೆಗಳನ್ನು ನೀಡಿ, ಯಾವುದೇ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ, ಇದೇ ಸಂಸ್ಕಾರವನ್ನು ನಿಮ್ಮ ಮಕ್ಕಳಲ್ಲಿಯೂ ಬಿತ್ತಿ, ದುಶ್ಚಟಗಳಿಗೆ ದಾಸರಾಗಬೇಡಿ ಎಂದು ಹಿತವಚನ ಹೇಳಿದರು. ಅವರ ಉತ್ತರೋತ್ತರ ಅಭಿವೃದ್ಧಿಗೆ ಹರಸಿದರು. ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಶಿಕ್ಷಕರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ ತಮ್ಮ ಬಾಲ್ಯದ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಿದರು.
Advertisement