ಮಂತ್ರಾಲಯದ ಪೂಜ್ಯರಿಗೆ ಗುರುವಂದನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಳಸಾಪೂರ ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂತ್ರಾಲಯದ ಶ್ರೀಕ್ಷೇತ್ರದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಗದಗ ಜಿಲ್ಲಾ ವೀರಶೈವ ಮಹಾಸಭಾದಿಂದ ಗುರುವಂದನೆ ಸಲ್ಲಿಸಲಾಯಿತು.

Advertisement

ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು. ಸದಾಶಿವಯ್ಯ ಮದರಿಮಠ, ಪ್ರಕಾಶ ಉಗಲಾಟ, ವಿರುಪಾಕ್ಷಗೌಡ ದೇಸಾಯಿಗೌಡ್ರ, ಈರಣ್ಣ ಬಾಳಿಕಾಯಿ, ಸಂತೋಷ ಕಬಾಡರ, ರಾಘಣ್ಣ ಕಾಲವಾಡ, ಗುರು ತಡಸದ, ಹಿರೇಮಠ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here