ಶಂಕರಮಠ ಸೇವಾ ಸಮಿತಿ ವತಿಯಿಂದ ಕೂಡಲಿ ಶ್ರೀಮದ್ ಜಗದ್ಗುರು ಅಭಿನವ ಶಂಕರಭಾರತೀ ಮಹಾಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಶಂಕರಮಠ ಸೇವಾ ಸಮಿತಿ ಕಾರ್ಯದರ್ಶಿಗಳಾದ ವೇ.ಮೂ. ರತ್ನಾಕರಭಟ್ ಜೋಶಿ, ಕೋಶಾಧ್ಯಕ್ಷರಾದ ಪ್ರೊ. ಎ.ಡಿ. ಗೋಡಖಿಂಡಿ, ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಗದಗ-ಬೆಟಗೇರಿ ಬ್ರಹ್ಮವೃಂದದ ಅಧ್ಯಕ್ಷ ದತ್ತಂಭಟ್ ತೆಂಬದಮನಿ, ಅದ್ವೈತ ಪ್ರಸಾರ ಪರಿಷತ್ ಅಧ್ಯಕ್ಷ ರಾಮಚಂದ್ರ ಮೋನೆ, ಕುಮಾರವ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಎಸ್.ಜಿ. ಪಾಟೀಲ, ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದ ಸಂಚಾಲಕಿ ಕಲಾವತಿ ಅಲಬೂರ, ಸುಮನ ಪಾಟೀಲ, ರವಿ ಪೂಜಾರ, ಪ್ರಸನ್ನಕುಮಾರ ಇನಾಮದಾರ, ಪ್ರೊ. ಅನೀಲ ವೈದ್ಯ, ವೇ.ಮೂ. ಗಣೇಶಭಟ್ ಪುರಾಣಿಕ, ಎಂ.ಟಿ. ಭಟ್, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಬ್ರಾಹ್ಮಣ ಸಮುದಾಯದವರು ಪಾಲ್ಗೊಂಡಿದ್ದರು.
Advertisement