ಹೈದರಾಬಾದ್:- ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ, ಕಾಗದದಲ್ಲಿ ಸುತ್ತಿಟ್ಟಿರುವ ತಂಬಾಕು ತುಂಡುಗಳು ಪತ್ತೆಯಾಗಿವೆ ಎಂದು ಭಕ್ತೆಯೊಬ್ಬರು ಆರೋಪಿಸಿದ್ದಾರೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ವಿವಾದದ ನಡುವೆಯೇ ಈ ಘಟನೆ ನಡೆದಿದೆ. ಗೊಲ್ಲಗುಡೆಂ ಪಂಚಾಯತ್‌ನ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಬಳಿಕ ನೆರೆಮನೆಯವರಿಗೆ ಹಂಚಲೆಂದು ಲಡ್ಡು ತೆಗೆದುಕೊಂಡು ಮನೆಗೆ ತೆರಳಿದ್ದರು. ಪ್ರಸಾದ ರೂಪದಲ್ಲಿ ತಂದಿದ್ದ ಲಡ್ಡುವಿನಲ್ಲಿ ಸಣ್ಣ ಪೇಪರ್‌ನಲ್ಲಿ ಕಟ್ಟಿದ್ದ ಗುಟ್ಕಾ ಪತ್ತೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡುತ್ತಿದ್ದ ಲಡ್ಡು ಈಗ ಮಹಾ ವಿವಾದಕ್ಕೆ ಕಾರಣವಾಗಿದೆ. ಲಡ್ಡುವಿನಲ್ಲಿಗೋವು, ಹಂದಿಯ ಕೊಬ್ಬು ಮಿಶ್ರಣ ಮಾಡಲಾಗಿದೆ, ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ ಬಳಿಕ ವಿವಾದ ಭುಗಿಲೆದ್ದಿದೆ.