ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಹಾಗೂ ಎಲ್ಲಾ ತಾಲೂಕುಗಳ ಪದಾಧಿಕಾರಿಗಳಿಂದ ಗದುಗಿನ ಡಾ. ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಶ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರ ಜನ್ಮದಿನವನ್ನು ಗದಗ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ನೇತೃತ್ವದಲ್ಲಿ ಆಚರಿಸಲಾಯಿತು.
Advertisement
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಈರಣ್ಣ ಬಾಳಿಕಾಯಿ, ಜಿಲ್ಲಾ ಪದಾಧಿಕಾರಿಗಳಾದ ಸುಭಾಷ್‌ಚಂದ್ರ ದಾನರೆಡ್ಡಿ, ಗಿರೀಶ ಸಂಶಿ, ಹಾಜಿಅಲಿ ಕೊಪ್ಪಳ, ಎಂ.ಎಸ್. ಪರ್ವತಗೌಡ್ರ, ಲಕ್ಷ್ಮಣ ನಾಯಕ, ಲಕ್ಷ್ಮಣ ಹಳ್ಳಿಕೇರಿ, ಕೆ.ಎಫ್. ದೊಡ್ಮನಿ, ಸಂತೋಷ್ ಪಾಟೀಲ, ರಾಜೇಸಾಬ ತಹಸೀಲ್ದಾರ, ಅಲ್ತಾಫ ಖಾಜಿ, ಇಮಾಮಸಾಬ ಉಮಚಗಿ, ಹುಣಸಿಮರದ ಸೇರಿದಂತೆ ಮಂಜುನಾಥ ದೊಡ್ಮನಿ, ಸಂಗಪ್ಪ ಎಲಬುಣಿಸಿ, ಬಾದಶಾಸಾಬ ಬಾಗವಾನ ಮುಂತಾದವರಿದ್ದರು.