HomeKoppalಭಾವಗೀತೆಗಳ ರಚನೆಯ ಹರಿಕಾರ ಎಚ್.ಎಸ್.ವಿ

ಭಾವಗೀತೆಗಳ ರಚನೆಯ ಹರಿಕಾರ ಎಚ್.ಎಸ್.ವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಭಾವಗೀತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರಹ ರೂಪದಲ್ಲಿ ಪ್ರಕಟಿಸಿದ ಶ್ರೇಯಸ್ಸು ಖ್ಯಾತ ಕವಿ ದಿವಂಗತ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಅಭಿಪ್ರಾಯಪಟ್ಟರು.

ಇಲ್ಲಿಯ ಕುಷ್ಟಗಿ ರಸ್ತೆಯಲ್ಲಿರುವ ಪದಕಿ ಟೌನ್ ಶಿಪ್ ಪ್ರದೇಶದ ಶಾಂತಿ ನಿವಾಸದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಖ್ಯಾತ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ ಹಾಗೂ ಜಿಲ್ಲಾ ಮಟ್ಟದ ಮುಂಗಾರು ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಎಚ್.ಎಸ್.ವಿ ಅವರ ಬದುಕು-ಬರಹ ಕುರಿತು ಮಾತನಾಡಿದರು.

ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜಾಮದಾರ್ ಮಾತನಾಡಿ, ಎಚ್.ಎಸ್.ವಿ ಅವರೊಂದಿಗಿನ ಒಡನಾಟ ಸ್ಮರಿಸಿದರು. ಕನ್ನಡ ಪಂಡಿತ್ ಶಿಕ್ಷಕ ತೀರ್ಥಯ್ಯ ಮಠದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶಿ.ಕಾ. ಬಡಿಗೇರ, ದೊಡ್ಡಯ್ಯ ಮಳಿಮಠ, ಚಿಂತಕ ಅಮೀನಸಾಬ್ ಮುಲ್ಲಾ, ಸ್ಪರ್ಧಾಸ್ಪೂರ್ತಿ ಸಂಪಾದಕ ಎಚ್.ಆರ್. ವಸ್ತ್ರದ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಂತರ ನಡೆದ ಮುಂಗಾರು ಕಾವ್ಯೋತ್ಸವದಲ್ಲಿ ಕವಿಗಳಾದ ಎ.ಪಿ. ಅಂಗಡಿ, ಪುಷ್ಪಲತಾ ಯೋಳಭಾವಿ, ಶಿವಮ್ಮ ಗುರುಸ್ಥಳಮಠ. ಶಾರದಾ ಶ್ರಾವಣಸಿಂಗ್ ರಜಪೂತ, ಡಾ. ಪ್ರಕಾಶ್ ಹಳ್ಳಿಗುಡಿ, ಸುಮಂಗಲಾ ಹಂಚಿನಾಳ, ಪ್ರದೀಪ್ ಹದ್ದಣ್ಣವರ್, ಪೂಜಾ ವಣಗೇರಿ, ವೀರೇಶ ಇಂದರಗಿ, ಶಿವಪ್ರಸಾದ್ ಹಾದಿಮನಿ, ನಿಂಗಪ್ಪ ಕೆ, ಅಕ್ಕಮಹಾದೇವಿ ಅಂಗಡಿ, ಶರಭಯ್ಯಸ್ವಾಮಿ ಹಿರೇಮಠ ಮೊದಲಾದವರು ಕವಿತೆ ವಾಚಿಸಿದರು.

ಚು.ಸಾ.ಪ ಜಿಲ್ಲಾಧ್ಯಕ್ಷ ರುದ್ರಪ್ಪ ಆರ್.ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಹಾದಿಮನಿ ನಿರೂಪಿಸಿದರು. ಪ್ರದೀಪ ಹದ್ದಣ್ಣವರ್ ವಂದಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!