ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹ್ಯಾಕಥಾನ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಡಿಜೈನ್ ವಿಭಾಗದ ಸಹಯೋಗದಲ್ಲಿ ಎರಡು ದಿನದ ಹ್ಯಾಕಥಾನ್-2025 ಕಾರ್ಯಕ್ರಮ ಜರುಗಿತು.

Advertisement

ರಾಜ್ಯದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳಿಂದ ಸುಮಾರು 86 ತಂಡಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಕಾರ್ಯಕ್ರಮವನ್ನು ಬೆಂಗಳೂರಿನ ಶೆಲ್ ಕಂಪನಿಯ ನುರಿತ ಇಂಜಿನಿಯರ್ ಆದಿತ್ಯ ನರೇಂದ್ರ ಉದ್ಘಾಟಿಸಿ ಮಾತನಾಡಿ, ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸಿ, ಮಷಿನ್ ಲರ್ನಿಂಗ್ ಮತ್ತು ಸ್ಟ್ಯಾಟಿಸ್ಟಿಕ್ ಕಮೆಂಡಿಂಗ್ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಬೇಕೆಂದು ಸಲಹೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಚಂದ್ರಶೇಖರ ಕುರಿ, ಪ್ರೊ. ಪದ್ಮನಾಭ ಬಿ, ಕೌಶಲ್ಯ ಅಭಿವೃದ್ಧಿ ಘಟಕ ಸಂಯೋಜಕರಾದ ಪ್ರೊ. ಪ್ರಸನ್ನ ನಾಡಗೌಡರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲ ಡಾ. ಜಿ.ಡಿ. ರೇವಣಕರ್ ವಹಿಸಿದ್ದರು. ಎರಡೂ ವಿಭಾಗಗಳ ಮುಖ್ಯಸ್ಥರಾದ ಡಾ. ರಮೇಶ ಬಡಿಗೇರ ಮತ್ತು ಪ್ರೊ. ವಿಜಯಕುಮಾರ ಎಸ್.ಎಮ್, ಸಿಬ್ಬಂದಿ ಸಂಯೋಜಕರಾದ ಪ್ರೊ. ಅಧೋಕ್ಷಜ ಕುಲಕರ್ಣಿ, ಪ್ರೊ. ನಾಗರಾಜ ತೇಲಕರ್ ಮತ್ತು ಪ್ರೇಮಾ ಯಲ್ಲೂರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಜಯದೀಪ, ಋತಿಕಾ ಮತ್ತ ಸಹನಾ ಕಾರ್ಯಕ್ರಮ ಆಯೋಜಿಸಿದ್ದರು.


Spread the love

LEAVE A REPLY

Please enter your comment!
Please enter your name here