ಬೆಂಗಳೂರು:- ರಾಜಧಾನಿ ಬೆಂಗಳೂರಿನ ವಿಧಾನಸೌಧ, ಜಯನಗರ ಸೇರಿ ಹಲವೆಡೆ ಇಂದು ಆಲಿಕಲ್ಲು ಮಳೆ ಆಗಿದ್ದು, ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ.
Advertisement
ಸಿಲಿಕಾನ್ ಸಿಟಿ ಬೆಂಗಳೂರಿನ ಮಲ್ಲೇಶ್ವರಂ, ಕಾರ್ಪೋರೇಷನ್, ವಿಧಾನಸೌಧ, ಜಯನಗರ, ಫ್ರೇಜರ್ ಟೌನ್, ಶಿವಾಜಿನಗರ ಸುತ್ತಮುತ್ತ ವರುಣನ ಅಬ್ಬರ ಜೋರಾಗಿದೆ. 8ನೇ ಮೈಲಿ, ದಾಸರಹಳ್ಳಿ, ಮಾದಾವರ, ಮಾದನಾಯಕನಹಳ್ಳಿ ಸುತ್ತಮುತ್ತ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ.
ಇನ್ನೂ ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಜೋರು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.