ಬೆಂಗಳೂರು;- ಬಿಗ್ ಬಾಸ್ ಸೀಸನ್ 10 ರ ಸ್ಪಪ್ಧಿಯಾಗಿದ್ದ ವರ್ತೂರ್ ಸಂತೋಷ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ FSL ವರದಿ ಬಂದ ಬಳಿಕ ಮತ್ತೊಂದು ಆಯಾಮದಲ್ಲಿ ತನಿಖೆ ನಡೆಸಲಾಗುವುದು.
ಒಂದು ವೇಳೆ ಇದು ಹುಲಿಯದ್ದೇ ಉಗುರು ಅಂತ ಎಫ್ಎಸ್ಎಲ್ ವರದಿ ಬಂದರೇ ವರ್ತೂರ್ ಸಂತೋಷ್ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಪ್ರಕರಣದ ತನಿಖೆ ಮತ್ತೊಂದು ಆಯಾಮದಲ್ಲಿ ನಡೆಯಲಿದೆ.
ಎಫ್ಎಸ್ಎಲ್ ವರದಿಯಲ್ಲಿ ಎಷ್ಟು ವರ್ಷದ ಹುಲಿ ಉಗುರು? ಯಾವ ಜಾತಿಯ ಹುಲಿ ? ಸೇರಿದಂತೆ ಮತ್ತಿತ್ತರ ಮಾಹಿತಿ ಲಭ್ಯವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಕಗ್ಗಲಿಪುರ ಅರಣ್ಯಾಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಹುಲಿ ಉಗುರನ್ನು ಸಂತೋಷ್ಗೆ ನೀಡಿದ್ದು ಯಾರು? ಯಾರು ಮಾರಿದರು? ಇದರ ಮೂಲ ಎಲ್ಲಿ ಎಂಬ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.
ಎಫ್ಎಸ್ಎಲ್ ವರದಿ ಮತ್ತು ತಾವು ನಡೆಸಿದ ತನಿಖೆಯ ವರದಿಯನ್ನು ಕಗ್ಗಲಿಪುರ ಅರಣ್ಯಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳಿಗೆ ಹಸ್ತಾಂತರ ಮಾಡಲಿದ್ದಾರೆ. ಈ ವರದಿಗಳನ್ನು ಆಧರಿಸಿ ಪ್ರಾಧಿಕಾರಗಳು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ದತ್ತಾಂಶವನ್ನು ಪರಿಶೀಲನೆ ಮಾಡಲಿದ್ದಾರೆ.