ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಇತ್ತೀಚೆಗೆ ಸ್ಫೋಟಕ ಹ್ಯಾಂಡ್ ಗ್ರೆನೇಡ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ಆರೋಪಿ ಸ್ಪೋಟಕ ವಿಚಾರ ಬಾಯ್ಬಿಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಲಾಗಿತ್ತು. ಕಳೆದ ಒಂದು ವಾರದಿಂದಲೂ ಕೇಂದ್ರ ತನಿಖಾ ತಂಡಗಳಿಂದ ಅಬ್ದುಲ್ ರೆಹಮಾನ್ ವಿಚಾರಣೆ ನಡೆದಿದ್ದು, ಅದೊಂದು ಜಾಗದಲ್ಲಿ ಸ್ಪೋಟಕ ಇಡಲು ಪ್ಲಾನ್ ನಡೆದಿತ್ತು ಎಂಬ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾನೆ.
ಅರಮನೆ ಮೈದಾನದ ಬಳಿಯೇ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದ ಆರೋಪಿ ಅಬ್ದುಲ್ಗೆ ಪ್ಯಾಲೇಸ್ ಗ್ರೌಂಡ್ನಲ್ಲಿ ಅನಾಮಿಕ ವ್ಯಕ್ತಿ ಸ್ಫೋಟಕ ಕೊಟ್ಟಿದ್ದು, ಸಿಗರೇಟ್ ಶಾಪ್ ಬಳಿ ಸ್ಫೋಟಕ ಇಡಲು ಹೇಳಿದ್ದಾಗಿ ಬಾಯ್ಬಿಟ್ಟಿದ್ದಾನೆ. ಒಂದೊಂದು ಬಾರಿ ಒಂದೊಂದು ಹೆಸರು ಹೇಳುತ್ತಿರುವ ಆರೋಪಿ, ಒಟ್ಟು ಮೂರು ಹೆಸರುಗಳನ್ನು ಹೇಳಿದ್ದಾನೆ.
ರಾಜಣ್ಣ ಎಂಬಾತನೇ ಅರಮನೆ ಮೈದಾನದಿಂದ ಆಟೋದಲ್ಲಿ ಥಣಿಸಂದ್ರದ ಹೋಟೆಲ್ಗೆ ಹೋಗಿದ್ದಾಗಿ ಅಬ್ದುಲ್ ಮಾಹಿತಿ ನೀಡಿದ್ದು, ಆಟೋ ಚಾಲಕನನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಆರೋಪಿ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಇಬ್ಬರು ಹೇಳಿದ್ದಾರೆ. ಸದ್ಯ ಅಬ್ದುಲ್ ರೆಹಮಾನ್ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಚುರುಕು ನಡೆಸಿದ್ದಾರೆ.