HomeGadag Newsರಚನಾತ್ಮಕವಾಗಿ ಸೇವೆ ಸಲ್ಲಿಸಿ : ಲತಾ ಜಮಖಂಡಿ

ರಚನಾತ್ಮಕವಾಗಿ ಸೇವೆ ಸಲ್ಲಿಸಿ : ಲತಾ ಜಮಖಂಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ 2024-25ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭಕ್ಕೆ ಇನ್‌ಸ್ಟಾಲಿಂಗ್ ಆಫೀಸರ್ ಆಗಿ ಆಗಮಿಸಿದ ಲತಾ ಜಮಖಂಡಿಯವರು ಸಂಸ್ಥೆಯ ನೂತನ ಅಧ್ಯಕ್ಷೆ ನಾಗರತ್ನಾ ಈಶ್ವರಪ್ಪ ಮಾರನಬಸರಿಯವರಿಗೆ ನಿಕಟಪೂರ್ವ ಅಧ್ಯಕ್ಷರಾದ ರಜನಿ ಪಾಟೀಲರಿಂದ ಅಧಿಕಾರ ಹಸ್ತಾಂತರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಲತಾ ಜಮಖಂಡಿ, ಮಾನವೀಯ ಮೌಲ್ಯಗಳು ಹಾಗೂ ಮಾನವೀತಗೆಗಾಗಿ ಸೇವೆ ಸಲ್ಲಿಸಲು ಹೆಚ್ಚು ಬದ್ಧರಾಗಿರಬೇಕು. ಇನ್ನರ್‌ವ್ಹೀಲ್ ಸಂಸ್ಥೆಯ ಆದರ್ಶಗಳಿಗೆ ಬೆಂಬಲವಾಗಿ ಹೊಸ ಹೊಸ ವಿಚಾರಗಳಿಂದ ರಚನಾತ್ಮಕವಾಗಿ ಸೇವೆ ಸಲ್ಲಿಸಲು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಇನ್ನರ್ ವ್ಹೀಲ್ ಜಿಲ್ಲೆ 317ರ ಮಾಜಿ ಚೇರಮನ್ ಪ್ರೇಮಾ ಗುಳಗೌಡರ ನೂತನವಾಗಿ ಸಂಸ್ಥೆಗೆ ಸೇರ್ಪಡೆಗೊಂಡ ಮಂಗಳ ಯಳಮಲಿ, ಶೀಲಾ ಮುದಗಲ್ಲ, ಜಯಶ್ರೀ ಜುಕ್ತಿಮಠ, ಸ್ಮಿತಾ ಹೊಸೂರು ಇವರಿಗೆ ಪ್ರಮಾಣವಚನ ಬೋಧಿಸಿ ಸಂಸ್ಥೆಗೆ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾಗಿ ವೀಣಾ ತಿರ್ಲಾಪೂರ, ಕೋಶಾಧ್ಯಕ್ಷರಾಗಿ ಪೂಜಾ ಕಿರಣ ಭೂಮಾ ಕಾರ್ಯಭಾರ ವಹಿಸಿಕೊಂಡರು.

ನೂತನ ಅಧ್ಯಕ್ಷರಾದ ನಾಗರತ್ನಾ ಮಾರನಬಸರಿಯವರು 2024-25ನೇ ಸಾಲಿನಲ್ಲಿ ಸಂಸ್ಥೆಯು ಕೈಗೊಳ್ಳುವ ಸಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು. ಪ್ರಾರಂಭದಲ್ಲಿ ರಜನಿ ಪಾಟೀಲರು ಸರ್ವರನ್ನು ಸ್ವಾಗತಿಸಿದರು. ಸಂಸ್ಥೆಯ ಕಾರ್ಯಕ್ರಮಗಳ ವರದಿಯನ್ನು ಹೇಮಾ ಪುಂಗಾಲಿಯಾ ಪ್ರಸ್ತುತಪಡಿಸಿದರು. ಇನ್ನರ್ ವ್ಹೀಲ್ ಪ್ರಾರ್ಥನೆಯನ್ನು ಸಾಗರಿಕ ಅಕ್ಕಿಯವರು ನೆರವೇರಿಸಿದರು. ಅಕ್ಷತಾ ಹಿರೇಮಠ ಪ್ರಾರ್ಥಿಸಿದರು. ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಪರಿಚಯವನ್ನು ಶುಭಾ ಕುಂದಗೋಳ ಮತ್ತು ಐಎಸ್‌ಒ, ಎಡಿಟರ್ ಹಾಗೂ ಕೋಶಧ್ಯಕ್ಷರನ್ನು ಶಿವಲೀಲಾ ಅಕ್ಕಿಯವರು ನೆರವೇರಿಸಿದರು. ಸುನಿತಾ ಅಂಗಡಿಯವರು ನೂತನ ಸದಸ್ಯರನ್ನು ಪರಿಚಯಿಸಿದರು.

ಹಿರಿಯ ಸದಸ್ಯರಾದ ಕಸ್ತೂರಿಬಾಯಿ ಹಿರೇಗೌಡರ ಕಾರ್ಯಕ್ರಮ ನಿರೂಪಿಸಿದರು. ವೀಣಾ ತಿರ್ಲಾಪೂರ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ರಾಜೇಶ್ವರಿ ಬಳ್ಳಾರಿ, ಶ್ರಿಯಾ ಪವಾಡಶೆಟ್ಟರ, ಆಶಾ ಪಟ್ಟಣಶೆಟ್ಟಿ, ಸುಮಾ ಪಾಟೀಲ, ಸರೋಜದೇವಿ ಆಲೂರ, ಪ್ರೇಮಾ ಮೇಟಿ, ಸರೋಜಿನಿ ಹಕ್ಕಾಪಕ್ಕಿ, ಶಾಂತಾ ಮುಂದಿನಮನಿ, ಅನ್ನಪೂರ್ಣ ವರವಿ, ಶಾಂತಾ ನಿಂಬಣ್ಣವರ, ಶಾಂತಾ ಗೌಡರ, ಸುಶಿಲಾ ಬಾಗಮಾರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!