ವಿಜಯಸಾಕ್ಷಿ ಸುದ್ದಿ, ಗದಗ: ಆಧುನಿಕ ವಿನ್ಯಾಸದ ಗದಗ-ಬೆಟಗೇರಿ ಸೀರೆಗಳನ್ನು ಅಂತಾರಾಷ್ಟ್ರೀಯ ಮಟ್ಟದದವರೆಗೂ ಪರಿಚಯಿಸಿ, ಬೃಹತ್ ಮಾರುಕಟ್ಟೆ ನಿರ್ಮಿಸಿ ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡುತ್ತಿರುವ ಬಸವಾ ಕುಟುಂಬದ ಬಲರಾಮ ಎಸ್.ಬಸವಾ (4ನೇ ತಲೆಮಾರು), ಮಾತೋಶ್ರೀ ತಿಪ್ಪುಬಾಯಿ ಎಸ್.ಬಸವಾ ಇವರ ಕುಟುಂಬದ ಸದಸ್ಯರಿಗೆ ಗದಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಸನ್ಮಾನಿಸಲಾಯಿತು.
Advertisement
ಬ್ಯಾಂಕ್‌ನ ಹಿರಿಯ ಅಧಿಕಾರಿಗಳಾದ ಹರೀಶ, ಅರವಿಂದ, ಜಿಲ್ಲಾ ಅಧಿಕಾರಿ ನಾಗರಾಜ ಹಾಗೂ ಸಂಜಯ ಮುಕ್ಕಣ್ಣೇಶ್ವರ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಸನ್ಮಾನಿಸಿ ಗೌರವಿಸಿದರು. ವಿಶ್ವಕರ್ಮ ಹಾಗೂ ಸ್ಟಾರ್ಟಪ್ ಯೋಜನೆಗಳ ಪ್ರಯೋಜನ ಪಡೆದು ಪುರಾತನ ಕೈಮಗ್ಗದ ಉಳಿವಿಗಾಗಿ ಎಲ್ಲರೂ ಪ್ರಯತ್ನಿಸಬೇಕೆಂದು ಹೇಳಿದರು.